ಗಾಝಾ ನರಮೇಧ: ಇಸ್ರೇಲ್ ನ ಪ್ರಧಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೆ ನಿರ್ಧಾರ - Mahanayaka

ಗಾಝಾ ನರಮೇಧ: ಇಸ್ರೇಲ್ ನ ಪ್ರಧಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೆ ನಿರ್ಧಾರ

30/04/2024

ಗಾಝಾದಲ್ಲಿ ನರಮೇಧವನ್ನು ಮುಂದುವರಿಸಿರುವ ಇಸ್ರೇಲ್ ನ ಪ್ರಧಾನಿ ನೇತನ್ಯಾಹು ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈ ಕುರಿತಂತೆ ಉನ್ನತ ಕಾನೂನು ತಜ್ಞರು ಇಸ್ರೇಲ್ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ನೇತನ್ಯಾಹು ಅವರಲ್ಲದೇ ರಕ್ಷಣಾ ಸಚಿವ ಯುಗಾ ಗ್ಯಾಲಂಟಿಮತ್ತು ಚೀಫ್ ಆಫ್ ಸ್ಟಾಫ್ ಹೆಲ್ತ್ಹಿ ಹಲೇರಿ ಎಂಬ ವರ ವಿರುದ್ಧವೂ ಅರೆಸ್ಟ್ ವಾರಂಟ್ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇಸ್ರೇಲ್ ನ ಗಾಝಾ ದಾಳಿಯ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಇದೀಗ ತನಿಖೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಅರೆಸ್ಟ್ ವಾರೆಂಟ್ನಿಂದ ನೇತನ್ಯಾಹು ವಿಚಲಿತರಾಗಿದ್ದಾರೆ ಮತ್ತು ಭಾರಿ ಒತ್ತಡದಲ್ಲಿದ್ದಾರೆ ಎಂದು ಇಸ್ರೇಲ್ ಪತ್ರಿಕೆಗಳು ವರದಿ ಮಾಡಿವೆ. ಕಳೆದ ವಾರ ಟೆಲ್ ಅವೀವ್ ನಲ್ಲಿ ಉನ್ನತ ಅಧಿಕಾರಿಗಳ ಸಭೆಯನ್ನು ನೇತಾನ್ಯಾಹು ಕರೆದಿದ್ದರು ಮತ್ತು ಅಲ್ಲಿ ಈ ವಿಷಯವನ್ನು ಚರ್ಚಿಸಿದ್ದರು ಎಂದು ವರದಿಯಾಗಿದೆ. ಅರೆಸ್ಟ್ ವಾರೆಂಟ್ ಅನ್ನು ತಡೆಯುವುದಕ್ಕಾಗಿ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಸಹಿತ ಜಗತ್ತಿನ ಬಲಾಢ್ಯ ರಾಷ್ಟ್ರಗಳ ನಾಯಕರನ್ನು ಸಂಪರ್ಕಿಸಿದ್ದಾರೆ ಎಂದು ಕೂಡ ತಿಳಿದು ಬಂದಿದೆ.

ಹಾಗೆಯೇ ಇಸ್ರೇಲ್ ಸ್ವಯಂ ರಕ್ಷಣೆಯ ಹಿನ್ನೆಲೆಯಲ್ಲಿ ಹೋರಾಡುತ್ತಿದ್ದು ಅದನ್ನು ತಡೆಯುವ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಯಾವುದೇ ಪ್ರಯತ್ನವನ್ನು ಅಂಗೀಕರಿಸುವುದಿಲ್ಲ ಎಂದು ನೇತಾನ್ಯಾಹು ಎಕ್ಸ್ ನಲ್ಲಿ ಬರೆದಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth


Provided by

ಇತ್ತೀಚಿನ ಸುದ್ದಿ