ಸೌದಿಯಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಹೊರಹೋದ ವಿಮಾನ..! - Mahanayaka

ಸೌದಿಯಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಹೊರಹೋದ ವಿಮಾನ..!

30/04/2024

ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನ ವೇಳೆ ವಿಮಾನವು ರನ್ ವೇಯಿಂದ ಹೊರಹೋದ ಘಟನೆ ನಡೆದಿದೆ. ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಕತಾರ್ ನ ದೋಹದಿಂದ ಬಂದ ಫ್ಲೈ ನಾಸ್ ವಿಮಾನವು ಲ್ಯಾಂಡಿಂಗ್ ನ ವೇಳೆ ಮುಖ್ಯ ರನ್ವೆಯಿಂದ ಹೊರ ಹೋಗಿರುವುದಾಗಿ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವರದಿಗಳು ತಿಳಿಸಿವೆ. ಬಫರ್ ಏರಿಯಾದಲ್ಲಿ ಸಾಗಿದ ವಿಮಾನವು ಹತ್ತಿರದ ಗ್ರೌಂಡ್ ನಲ್ಲಿ ಸ್ಥಗಿತಗೊಂಡಿದೆ. ಪ್ರಯಾಣಿಕರು ಮತ್ತು ವಿಮಾನದ ಸುರಕ್ಷತೆಯನ್ನು ಖಾತರಿಪಡಿಸಿಕೊಂಡ ಬಳಿಕ ವಿಮಾನವು ನಿಗದಿತ ಸ್ಟಾಫ್ ಗೆ ಪ್ರಯಾಣವನ್ನು ಮುಂದುವರಿಸಿದೆ.

ಪ್ರಯಾಣಿಕರು ಆ ಬಳಿಕ ಸುರಕ್ಷಿತವಾಗಿ ಇಳಿದಿದ್ದಾರೆ. ಏರ್ಪೋರ್ಟ್ ಮ್ಯಾನೇಜ್ಮೆಂಟ್ ಆ ಬಳಿಕ ಪ್ರಯಾಣಿಕರ ಆರೋಗ್ಯವನ್ನು ಪರಿಶೀಲಿಸಿದ್ದಾರೆ. ಯಾರಿಗೂ ಗಾಯವಾಗಿಲ್ಲ ಎಂದು ಖಾತರಿಪಡಿಸಿಕೊಂಡ ಬಳಿಕ ಪ್ರಯಾಣಿಕರನ್ನು ಬಿಡುಗಡೆಗೊಳಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth


Provided by

ಇತ್ತೀಚಿನ ಸುದ್ದಿ