ಅಪಾರ್ಟ್ ಮೆಂಟ್ ನ 4ನೇ ಅಂತಸ್ತಿನಿಂದ ಬಿದ್ದ ಮಗು: ಸಾಹಸ ಮಾಡಿ ಕೊನೆಗೂ ರಕ್ಷಣೆ - Mahanayaka

ಅಪಾರ್ಟ್ ಮೆಂಟ್ ನ 4ನೇ ಅಂತಸ್ತಿನಿಂದ ಬಿದ್ದ ಮಗು: ಸಾಹಸ ಮಾಡಿ ಕೊನೆಗೂ ರಕ್ಷಣೆ

30/04/2024

ಅಪಾರ್ಟ್ ಮೆಂಟ್ ನ ನಾಲ್ಕನೇ ಅಂತಸ್ತಿನಿಂದ ಬಿದ್ದು ಎರಡನೇ ಅಂತಸ್ತಿನಲ್ಲಿ ಸಿಲುಕಿಕೊಂಡ ಏಳು ತಿಂಗಳ ಮಗುವನ್ನು ಅಪಾರ್ಟ್ ಮೆಂಟ್ ನ ನಿವಾಸಿಗಳು ರಕ್ಷಿಸಿದ ಸಾಹಸಮಯ ಕೃತ್ಯದ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಚೆನ್ನೈನಲ್ಲಿ. ಎರಡನೇ ಅಂತಸ್ತಿನ ಟಿನ್ ಶೀಟ್ ನ ಬದಿಯಲ್ಲಿ ನೇತಾಡಿದಂತೆ ತೂಗುತ್ತಿದ್ದ ಮಗುವನ್ನು ರಕ್ಷಿಸಲಾಗಿದೆ.

ಮೊದಲ ಅಂತಸ್ತಿನ ಬಾಲ್ಕನಿಗೆ ಹತ್ತಿ ಈ ಮಗುವನ್ನು ಓರ್ವರು ರಕ್ಷಿಸಿದ್ದಾರೆ. ಮಗು ಬಿದ್ದರೆ ಗಾಯವಾಗಬಾರದು ಎಂಬ ನೆಲೆಯಲ್ಲಿ ಫ್ಲ್ಯಾಟ್ ನಿವಾಸಿಗಳು ಕೆಳಗೆ ಬೆಡ್ ಶೀಟ್ ಹಿಡಿದು ಮಗುವನ್ನು ರಕ್ಷಿಸುವುದಕ್ಕೆ ಪ್ರಯತ್ನಿಸುತ್ತಿರುವುದು ಕೂಡ ವಿಡಿಯೋದಲ್ಲಿದೆ. ಎರಡು ನಿಮಿಷ 20 ಸೆಕೆಂಡ್ ನ ದೀರ್ಘ ವಿಡಿಯೋವನ್ನು ಬಾಲ್ಕನಿಯಲ್ಲಿರುವ ವ್ಯಕ್ತಿ ಶೂಟ್ ಮಾಡಿದ್ದಾರೆ. ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈಗೆ ಮತ್ತು ಕಾಲಿಗೆ ಸಣ್ಣಪುಟ್ಟ ಗೀರು ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ತಾಯಿಯ ಕೈಯಲ್ಲಿದ್ದ ಮಗು ಅಚಾನಕ್ಕಾಗಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.


Provided by

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ