ಅರಕಲಗೂಡಿನಲ್ಲಿ ವಕೀಲರಾದ ಜಿ.ಡಿ.ಮಹೇಶ್ ಕುಮಾರ್ - ಎಸ್.ಟಿ.ಪ್ರಕಾಶ್ ಆಮ್ ಆದ್ಮಿ ಪಕ್ಷ ಸೇರ್ಪಡೆ - Mahanayaka

ಅರಕಲಗೂಡಿನಲ್ಲಿ ವಕೀಲರಾದ ಜಿ.ಡಿ.ಮಹೇಶ್ ಕುಮಾರ್ — ಎಸ್.ಟಿ.ಪ್ರಕಾಶ್ ಆಮ್ ಆದ್ಮಿ ಪಕ್ಷ ಸೇರ್ಪಡೆ

aap
24/09/2022

ಹಾಸನ:  ಅರಕಲಗೂಡಿನಲ್ಲಿ ರಾಜಕೀಯ ಪಕ್ಷಗಳ ನಡೆಗಳಿಂದ ಬೇಸತ್ತು ವಕೀಲರಾದ ಜಿ.ಡಿ.ಮಹೇಶ್ ಕುಮಾರ್ ಹಾಗೂ ಎಸ್.ಟಿ.ಪ್ರಕಾಶ್ ಸಲಗೇರಿ ಅವರು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಗೊಂಡಿದ್ದು, ಈ ಮೂಲಕ ತಾಲೂಕಿನ ಅಭಿವೃದ್ಧಿಗೆ ಹೋರಾಟ ರೂಪಿಸಲು ಸಜ್ಜಾಗಿದ್ದಾರೆ.

ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸಲು ಆಮ್ ಆದ್ಮಿ ಪಕ್ಷ ಸೇರ್ಪಡೆಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿರುವ ಜಿ.ಡಿ.ಮಹೇಶ್ ಕುಮಾರ್ ಮತ್ತು ಎಸ್.ಟಿ.ಪ್ರಕಾಶ್, ಅರಕಲಗೂಡು ಕ್ಷೇತ್ರವು ಅಭಿವೃದ್ಧಿ ವಿಚಾರದಲ್ಲಿ ತೀರಾ ಹಿಂದೆ ಬಿದ್ದಿದ್ದು, ಜನಪ್ರತಿನಿಧಿಗಳ ಬದ್ಧತೆಯ ಕೊರತೆ ಹಾಗೂ ನಿರ್ಲಕ್ಷ್ಯತನದಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರತ್ಯಕ್ಷವಾಗುವ ಜನಪ್ರತಿನಿಧಿಗಳು ಗೆದ್ದ ನಂತರ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ತಮ್ಮನ್ನು ಗೆಲ್ಲಿಸಿದ ಹಳ್ಳಿಯ ಜನರನ್ನು ಮರೆತು ಬಿಡುತ್ತಾರೆ ಎಂದರು.

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ನಡೆಸಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ಪ್ರೇರೇಪಣೆಗೊಂಡು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ. ಪಕ್ಷವು ರಾಜ್ಯಾದ್ಯಂತ ಸಂಘಟಿತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅರಕಲಗೂಡಿನಲ್ಲಿಯೂ ಜನರು ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ದೆಹಲಿಯಲ್ಲಿ ಪಕ್ಷದ ಮುಖ್ಯಸ್ಥರಾದ ಅರವಿಂದ ಕೇಜ್ರಿವಾಲ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಜನರಿಗೆ ಅರಿವು ಮೂಡಿಸುವ ಮೂಲಕ ರಾಜ್ಯದಲ್ಲೂ ಮಾದರಿ ಸರ್ಕಾರ ತರಲು ನಮ್ಮ ಸಹಕಾರ ನೀಡುತ್ತೇವೆ ಎಂದರು.

ವಕೀಲರಾದ ಜಿ.ಡಿ.ಮಹೇಶ್ ಕುಮಾರ್ ಹಾಗೂ ಎಸ್.ಟಿ.ಪ್ರಕಾಶ್ ಸಲಗೇರಿ ಆಮ್ ಆದ್ಮಿ ಪಕ್ಷ ಸೇರ್ಪಡೆ


ರಾಜಕೀಯ ಎಂದರೆ, ಧರ್ಮ, ದ್ವೇಷ, ಭ್ರಷ್ಟಾಚಾರ, ದಬ್ಬಾಳಿಕೆ, ನಂಬಿಕೆ ದ್ರೋಹ ಎನ್ನುವಂತಹ ವಾತಾವರಣಗಳನ್ನು ನಮ್ಮನ್ನು ಆಳುವ ಪಕ್ಷಗಳು ಸೃಷ್ಟಿಸಿವೆ. ಆದರೆ, ಆಮ್ ಆದ್ಮಿ ಪಕ್ಷ ರಾಜಕೀಯ ಎಂದರೆ, ಅಭಿವೃದ್ಧಿ ಎನ್ನುವುದನ್ನು ತೋರಿಸಿಕೊಟ್ಟಿದೆ. ಹೀಗಾಗಿಯೇ ನಾವು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಗೊಂಡಿದ್ದೇವೆ ಎಂದರು.

ಹಣ, ಆಮಿಷಗಳನ್ನು ಒಡ್ಡಿ ಚುನಾವಣೆ ಗೆಲ್ಲುವವರು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುವುದಿಲ್ಲ. ಇಂದು ಅವರು ಚುನಾವಣೆ ಗೆಲ್ಲಲು ಹಣ ಹೂಡಿಕೆ ಮಾಡಿದರೆ, ಚುನಾವಣೆಯಲ್ಲಿ ಗೆದ್ದ ಬಳಿಕ ಲಾಭಕ್ಕಾಗಿ ಭ್ರಷ್ಟಾಚಾರಕ್ಕೆ ಮುಂದಾಗುತ್ತಾರೆ. ಇದರಿಂದಾಗಿ, ಜನರ ಜೀವನ ದುಸ್ತರವಾಗುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಇಂದು ದೇಶದಲ್ಲಿ ನಾವು ಈ ದುಸ್ಥಿತಿಯನ್ನು ಕಣ್ಣಾರೆ ಕಾಣುತ್ತಿದ್ದೇವೆ. ದೇಶದ ಅಭಿವೃದ್ಧಿ ಆಮ್ ಆದ್ಮಿ ಪಕ್ಷದಿಂದ ಮಾತ್ರವೇ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವು ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ