ಗ್ರಾ.ಪಂ. ಮಾಜಿ ಅಧ್ಯಕ್ಷನ ಮಗನ ಬರ್ಬರ ಹತ್ಯೆ: ಚರಂಡಿಯಲ್ಲಿ ಮೃತದೇಹ ಪತ್ತೆ!

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಮಗನನ್ನು ಹತ್ಯೆ ಮಾಡಿ ಚರಂಡಿಯಲ್ಲಿ ಮೃತದೇಹವನ್ನು ಮುಚ್ಚಿ ಆರೋಪಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಕೆರೆ ಬಳಿಯ ಬಡಾವಣೆಯಲ್ಲಿ ನಡೆದಿದೆ.
ಮಾರುತೇಶ್(30) ಹತ್ಯೆಯಾಗಿರುವ ಯುವಕನಾಗಿದ್ದಾನೆ. ಈತ ಹಾರೋಬಂಡೆ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರೆಡ್ಡಿ ಎಂಬವರ ಮಗನಾಗಿದ್ದಾನೆ.
ಪ್ಲಂಬರ್, ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಮಾರುತೇಶ್ ತನ್ನ ಜೊತೆಗಾರನಿಂದಲೇ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಬೈಕ್ ಹಾಗೂ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಕಳೆದ ಮೂರು ದಿನಗಳಿಂದ ಮಾರುತೇಶ್ ನಾಪತ್ತೆಯಾಗಿದ್ದ. ಇಂದು ಈತನ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಂಕಿತ ಆರೋಪಿಯು ಗ್ರಾಮದಲ್ಲಿ ಕೊಲೆಯ ಬಗ್ಗೆ ಅಸ್ಪಷ್ಟವಾಗಿ ಮಾತನಾಡಿದ್ದ ಎನ್ನಲಾಗಿದೆ. ಇದರ ಆಧಾರದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಶಂಕಿತ ಆರೋಪಿಯು ಗ್ರಾಮದಲ್ಲಿ ಕೊಲೆಯ ಬಗ್ಗೆ ಅಸ್ಪಷ್ಟವಾಗಿ ಮಾತನಾಡಿದ್ದ ಎನ್ನಲಾಗಿದೆ. ಇದರ ಆಧಾರದಲ್ಲಿ ಪರಿಶೀಲನೆ ನಡೆಸಿದ ವೇಳೆ ಮಾರುತೇಶ್ ನ ಮೃತದೇಹ ಪತ್ತೆಯಾಗಿದೆ.
ಸದ್ಯ ಶಂಕಿತ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಯ ಬಂಧನದ ಬಳಿಕ ಕೊಲೆಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: