ಜಿಮ್ ಮಾಲೀಕನ ಕೊಲೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ - Mahanayaka

ಜಿಮ್ ಮಾಲೀಕನ ಕೊಲೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ

17/10/2024

ಮಥುರಾ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರ ವಿಶೇಷ ಘಟಕವು 35 ವರ್ಷದ ಜಿಮ್ ಮಾಲೀಕರ ಕೊಲೆಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್-ಹಾಶಿಮ್ ಬಾಬಾ ಗ್ಯಾಂಗ್ ನ ಮತ್ತೊಬ್ಬ ಶೂಟರ್ ನನ್ನು ಬಂಧಿಸಿದ್ದಾರೆ.

ಜಿಮ್ ಮಾಲೀಕ ನಾದಿರ್ ಶಾ ಅವರನ್ನು ಸೆಪ್ಟೆಂಬರ್ 12 ರಂದು ದಕ್ಷಿಣ ದೆಹಲಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.

ದೆಹಲಿ ಪೊಲೀಸರ ಪ್ರಕಾರ, ಸೆಪ್ಟೆಂಬರ್ 12 ರಂದು ದೆಹಲಿಯ ಗ್ರೇಟರ್ ಕೈಲಾಶ್‌ನಲ್ಲಿ ನಡೆದ ಜಿಮ್ ಆಪರೇಟರ್ ನಾದಿರ್ ಶಾ ಅವರ ಕೊಲೆಯಲ್ಲಿ ಆರೋಪಿ ಯೋಗೇಶ್ ಮುಖ್ಯ ಶೂಟರ್ ಆಗಿದ್ದ.

ಆರೋಪಿ ಯೋಗೇಶ್ ನನ್ನು ಬಂಧಿಸುವ ಮೊದಲು ಕಾಲಿಗೆ ಗುಂಡು ಹಾರಿಸಲಾಗಿದೆ. ಮಥುರಾ ಹೆದ್ದಾರಿಯಲ್ಲಿ ಎನ್ಕೌಂಟರ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಅಕ್ಟೋಬರ್ 13 ರಂದು ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದರು. ಆರೋಪಿಯನ್ನು ಕಬೀರ್ ನಗರದ ನಿವಾಸಿ ಮಧುರ್ ಅಲಿಯಾಸ್ ಅಯಾನ್ ಎಂದು ಗುರುತಿಸಲಾಗಿದ್ದು, ನರೇಲಾದಿಂದ ಬವಾನಾ ರಸ್ತೆಯಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಗಾಯಗೊಂಡ ನಂತರ ಬಂಧಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ