ಪ್ರಧಾನಿ ಮಾತುಗಳಲ್ಲಿ 'ದ್ವೇಷ' ವೇ ಹೆಚ್ಚು: ಲೋಕಸಭಾ ಚುನಾವಣೆ ವೇಳೆ ಶತಕ ದಾಟಿದ 'ಮುಸ್ಲಿಂ ದ್ವೇಷ' ಭಾಷಣ..! - Mahanayaka
7:17 PM Saturday 13 - September 2025

ಪ್ರಧಾನಿ ಮಾತುಗಳಲ್ಲಿ ‘ದ್ವೇಷ’ ವೇ ಹೆಚ್ಚು: ಲೋಕಸಭಾ ಚುನಾವಣೆ ವೇಳೆ ಶತಕ ದಾಟಿದ ‘ಮುಸ್ಲಿಂ ದ್ವೇಷ’ ಭಾಷಣ..!

15/08/2024

ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ 173 ಭಾಷಣ ಮಾಡಿದ್ದಾರೆ. ಅದರಲ್ಲಿ 110 ಭಾಷಣಗಳು ಮುಸ್ಲಿಂ ವಿರುದ್ಧ ದ್ವೇಷ ಮತ್ತು ಪ್ರಚೋದನಾಕಾರಿಯಾಗಿವೆ ಎಂದು ಹ್ಯೂಮನ್‌ ರೈಟ್ಸ್‌ ವಾಚ್ ಹೇಳಿದೆ.


Provided by

ಚುನಾವಣಾ ಸಮಯದಲ್ಲಿನ ಮೋದಿ ಭಾಷಣಗಳ ಬಗ್ಗೆ ವಿಶ್ಲೇಷಣೆ ನಡೆಸಿ, ವರದಿ ಬಿಡುಗಡೆ ಮಾಡಿರುವ HRW, “ಈ ಇಸ್ಲಾಮೋಫೋಬಿಕ್ ಹೇಳಿಕೆಗಳು ರಾಜಕೀಯ ವಿರೋಧಿಗಳನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದ್ದವು. ಮೋದಿ ಯವರ ಇಸ್ಲಾಮೋಫೋಬಿಕ್ ಭಾಷಣವು ಕೇವಲ ಮುಸ್ಲಿಂ ವಿರುದ್ಧ ದ್ವೇಷವನ್ನು ಉತ್ತೇಜಿಸುತ್ತದೆ. ತಪ್ಪು ಮಾಹಿತಿಯ ಮೂಲಕ ಬಹುಸಂಖ್ಯಾತ ಹಿಂದು ಸಮುದಾಯದಲ್ಲಿ ಭಯವನ್ನು ಬೆಳೆಸುತ್ತದೆ” ಎಂದು ಹೇಳಿದೆ.

ಬಾಂಗ್ಲಾದೇಶದಲ್ಲಿ ಹಿಂದುಗಳು ಮತ್ತು ಇತರ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ರಕ್ಷಣೆಗಾಗಿ ತಾನು ಆಶಿಸುವುದಾಗಿ ಮೋದಿ ಇತ್ತೀಚೆಗೆ ಹೇಳಿದ್ದರು. ಆದರೆ, ಮೋದಿ ಅವರು ಚುನಾವಣಾ ಸಮಯದಲ್ಲಿ ಮಾಡಿದ ಭಾಷಣಗಳು ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ದ್ವೇಷವನ್ನು ಪ್ರಚೋದಿಸಿದೆ ಎಂದು HRW ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ