ಎಚ್ ಡಿ ಎಫ್ ಸಿ ಬ್ಯಾಂಕ್ ಗೆ 10 ಕೋಟಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್ - Mahanayaka
7:05 PM Thursday 14 - November 2024

ಎಚ್ ಡಿ ಎಫ್ ಸಿ ಬ್ಯಾಂಕ್ ಗೆ 10 ಕೋಟಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್

hdfc bank
29/05/2021

ಮುಂಬೈ:   ಎಚ್ ಡಿ ಎಫ್ ಸಿ ಬ್ಯಾಂಕ್ ಗೆ  ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 10 ಕೋಟಿ ರೂಪಾಯಿ ದಂಡ ವಿಧಿಸಿದ್ದು, ವಾಹನ ಸಾಲ ವಿಭಾಗದ ಲೋಪದೋಷಗಳಿಗಾಗಿ ಈ ದಂಡ ವಿಧಿಸಲಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಾಹನ ಸಾಲ ವಿಭಾಗದಲ್ಲಿ ಕೆಲವು ಲೋಪಗಳು ಇರುವ ಬಗ್ಗೆ ದೂರು ಬಂದಿತ್ತು. ಅದನ್ನು ಆರ್‌ಬಿಐ ಪರಿಶೀಲಿಸಿತ್ತು. ದಂಡ ವಿಧಿಸುವ ಆದೇಶವನ್ನು ಗುರುವಾರವೇ ಹೊರಡಿಸಲಾಗಿದೆ.

ವಾಹನ ಸಾಲಕ್ಕೆ ಸಂಬಂಧಿಸಿದ ವಿಚಾರದಲ್ಲಿ ಶಾಸನಬದ್ಧವಾಗಿ ಮಾಡಬೇಕಿದ್ದ ಕೆಲವು ಕೆಲಸಗಳಲ್ಲಿ ಆಗಿರುವ ಲೋಪ ಎಸಗಲಾಗಿದೆ ಎಂದು ಎಂದು ಹೇಳಲಾಗಿದೆ.  ದೂರಿಗೆ ಪ್ರತಿಕ್ರಿಯೆ ನೀಡುವಂತೆ ಆರ್‌ ಬಿಐ, ಎಚ್‌ ಡಿ ಎಫ್‌ ಸಿ ಬ್ಯಾಂಕ್‌ಗೆ ನೋಟಿಸ್ ನೀಡಿತ್ತು. ಇದಕ್ಕೆ ಬ್ಯಾಂಕ್‌ ನೀಡಿದ ವಿವರಣೆಯನ್ನು ಪರಿಶೀಲಿಸಿದ ಆರ್‌ ಬಿ ಐ, ದಂಡ ವಿಧಿಸಬೇಕಾದಂತಹ ಲೋಪ ಆಗಿದೆ ಎಂದು ತೀರ್ಮಾನಿಸಿತು ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ