ಕೊರೋನಾ ಸಂಬಂಧಿತ ಸಾಧನ, ಸಲಕರಣೆಗಳಿಗೆ GSTಯಿಂದ ವಿನಾಯತಿ - Mahanayaka
5:10 AM Thursday 23 - January 2025

ಕೊರೋನಾ ಸಂಬಂಧಿತ ಸಾಧನ, ಸಲಕರಣೆಗಳಿಗೆ GSTಯಿಂದ ವಿನಾಯತಿ

nirmala seetharaman
28/05/2021

ನವದೆಹಲಿ: ಕೊರೋನಾ ಸಂಬಂಧಿತ ಸಾಧನ, ಸಲಕರಣೆಗಳಿಗೆ ಆಗಸ್ಟ್ 31 ರವರೆಗೆ ಸರಕು ಮತ್ತು ಸೇವಾ ತೆರಿಗೆಯಿಂದ(GST) ವಿನಾಯಿತಿ ನೀಡಲಾಗಿದೆ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಕೋವಿಡ್ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಉಪಕರಣಗಳ ಜಿಎಸ್ಟಿ ವಿನಾಯಿತಿ ನೀಡಲಾಗಿದೆ. ಬ್ಲಾಕ್ ಫಂಗಸ್ ಗೆ ನೀಡುವ ಔಷಧಕ್ಕೂ ಜಿಎಸ್ಟಿ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ಅದೇ ರೀತಿ ಬ್ಲಾಕ್ ಫಂಗಸ್ ಸೋಂಕಿತರಿಗೆ ನೀಡುವ ಆಂಫೋಟೆರಿಸಿನ್ ಬಿ ಇಂಜೆಕ್ಷನ್ ಗೂ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.

COVID- ಸಂಬಂಧಿತ ಸಾಧನಗಳಿಗೆ ಆಗಸ್ಟ್ 31, 2021 ರ ವರೆಗೆ ತಾತ್ಕಾಲಿಕ ವಿನಾಯಿತಿ ನೀಡುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ 43ನೇ ಜಿಎಸ್ಟಿ ಮಂಡಳಿ ಸಭೆ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಸಭೆಯ ನಂತರ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕಪ್ಪು ಶಿಲೀಂಧ್ರ ಸೋಂಕು ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ, ಆಂಫೊಟೆರಿಸಿನ್ ಬಿ ಇಂಜೆಕ್ಷನ್ ಅನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ