ಬಸ್ ನಲ್ಲೇ ಹೃದಯಾಘಾತ: ಕುಳಿತಲ್ಲೇ  ವ್ಯಕ್ತಿ ಸಾವು - Mahanayaka

ಬಸ್ ನಲ್ಲೇ ಹೃದಯಾಘಾತ: ಕುಳಿತಲ್ಲೇ  ವ್ಯಕ್ತಿ ಸಾವು

bmtc
08/03/2023


Provided by

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ  ಪ್ರಯಾಣಿಸುವಾಗ ಕುಳಿತಲ್ಲೇ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆ.ಪಿ.ಅಬ್ದುಲ್ ಖಾದಿರ್(61) ಮೃತಪಟ್ಟ ವ್ಯಕ್ತಿ. ಬಿಎಂಟಿಸಿ ಬಸ್ ನಲ್ಲಿ ಯಶವಂತಪುರದಿಂದ ಮೆಜೆಸ್ಟಿಕ್ ಗೆ ಬರುತ್ತಿದ್ದ ವೇಳೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಖಾದಿರ್ ಗೆ ಹೃದಯಾಘಾತವಾಗಿದೆ.

ಮಂತ್ರಿ ಮಾಲ್ ಬಳಿ ಬರುತ್ತಿದ್ದಂತೆ ಅಬ್ದುಲ್ ಖಾದಿರ್ ಗೆ ಹಾರ್ಟ್ ಅಟ್ಯಾಕ್ ಆಗಿದ್ದು ಬಸ್ ನಲ್ಲಿ ಕುಳಿತಲ್ಲೇ ಪ್ರಾಣ ಚೆಲ್ಲಿದ್ದಾರೆ.

ಇತ್ತೀಚೆಗೆ ಸಡನ್ ಡೆತ್ ಕೇಸ್ ಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಸಾಕಷ್ಟು ಸಂಖ್ಯೆಯ ಯುವಕರು ಹಾಗೂ ಮಧ್ಯ ವಯಸ್ಕರು ಹೃದಯಾಘಾತಕ್ಕೊಳಗಾಗುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ