ವಾಮಾಚಾರಕ್ಕೆ ಬೆಚ್ಚಿಬಿದ್ದ ಮಲೆನಾಡು: ಮನೆಯ ಮುಂದೆಯೇ ಭಯಂಕರ ಮಾಟ! - Mahanayaka

ವಾಮಾಚಾರಕ್ಕೆ ಬೆಚ್ಚಿಬಿದ್ದ ಮಲೆನಾಡು: ಮನೆಯ ಮುಂದೆಯೇ ಭಯಂಕರ ಮಾಟ!

vamachara
19/10/2024

ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ವಾಮಾಚಾರಕ್ಕೆ ಮಲೆನಾಡು ಬೆಚ್ಚಿಬಿದ್ದಿದೆ. ಮೂರು ದಾರಿ ಕೂಡಿರುವ ಸ್ಥಳದಲ್ಲಿ ಕಿಡಿಗೇಡಿಗಳು ವಾಮಾಚಾರ ನಡೆಸಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಸಿರು ಬಳೆಗಳ ಮೇಲೆ ಮಣ್ಣಿನ ಬೊಂಬೆ ಇಟ್ಟು ವಾಮಾಚಾರ ನಡೆಸಲಾಗಿದೆ. ಮಡಕೆಗೆ ಮನುಷ್ಯನ ರೂಪ ನೀಡಿ ಭಯಂಕರವಾಗಿ ಕಾಣುವಂತೆ ವಾಮಾಚಾರ ನಡೆಸಲಾಗಿದೆ.

ವಾಮಾಚಾರ ಮಾಡೋರು ಪ್ರಾಣಿ ಬಲಿ ಕೊಟ್ಟು ವಾಮಾಚಾರ ಮಾಡೋದು ಹೆಚ್ಚು, ಬಾಳೆಎಲೆ, ಹಸಿರು ಬಳೆ, ಮಡಕೆಗೆ ಕಾಳಿ ರೂಪ ನೀಡಿ ಮಾಟ ಮಾಡಲಾಗಿದೆ ಎಂದು ಹೇಳಲಾಗಿದೆ.

ಹೆಡದಾಳು ಗ್ರಾಮದ ಚೇತನ್ ಎಂಬುವರ ಮನೆ ಮುಂದೆಯೇ ವಾಮಾಚಾರ ನಡೆಸಲಾಗಿದೆ. ಬೆಳಗಿನ ಜಾವ 4–5 ಗಂಟೆಗೆ ಐವರು ಕಿಡಿಗೇಡಿಗಳು ಕೃತ್ಯ ನಡೆಸಿದ್ದಾರೆ. ವಾಮಾಚಾರ ಮಾಡುವುದನ್ನ ಮನೆಯೊಳಗಿಂದ ಕಂಡ ಹಳ್ಳಿಗರು, ಮನೆಯಿಂದ ಹೊರಬರಲು ಭಯಗೊಂಡು ಹೊರಬಂದಿಲ್ಲ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಅರಿಶಿನ-ಕುಂಕುಮ, ಕಾಯಿ, ಹಣ್ಣು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿದೆ.

ವಾಮಾಚಾರ ಒಂದು ಮೂಢನಂಬಿಕೆಯ ಆಚರಣೆಯಾಗಿದೆ. ಇದರಿಂದ ಜನರಲ್ಲಿ ಭೀತಿ, ಮಾನಸಿಕ ಅಶಾಂತಿ ಉಂಟಾಗುವಂತಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ