ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ 16 ವರ್ಷದ ಬಾಲಕನ ದೇಹ  ಛಿದ್ರಚಿದ್ರ - Mahanayaka

ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ 16 ವರ್ಷದ ಬಾಲಕನ ದೇಹ  ಛಿದ್ರಚಿದ್ರ

05/01/2021

ಜೈಪುರ: ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ 16 ವರ್ಷದ ಬಾಲಕ ಛಿದ್ರಛಿದ್ರವಾದ ಹೃದಯ ವಿದ್ರಾವಕ ಘಟನೆ ಜೈಪುರದ ನಾಹರಗಢ ರಸ್ತೆಯ ಖಂಡೇಲಾವಾಲ ಫ್ಲೋರ್ ಮಿಲ್ ನಲ್ಲಿ ನಡೆದಿದೆ.

ಅಮಿತ್ ಎಂಬ ಬಾಲಕ  ಇಲ್ಲಿನ ಗಿರಣಿಯಲ್ಲಿ ಗೋದಿಯನ್ನು ಯಂತ್ರಕ್ಕೆ ಹಾಕಿ ಹಿಟ್ಟು ಮಾಡುವ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಯಂತ್ರದ ಮೇಲೆ ಬಿದ್ದಿದ್ದು, ಪರಿಣಾಮವಾಗಿ ಕ್ಷಣಗಳಲ್ಲಿಯೇ ಬಾಲಕನ ದೇಹ ಛಿದ್ರವಾಗಿದೆ.

ಕೈಕಾಲು, ದೇಹ, ತಲೆ ಪ್ರತ್ಯೇಕವಾಗಿ ಭೀಕರವಾಗಿ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಅರ್ಧದೇಹ ಯಂತ್ರದಲ್ಲಿಯೇ ಸಿಲುಕಿಕೊಂಡಿತ್ತು. ಬಳಿಕ ಗ್ಯಾಸ್ ಕಟ್ಟರ್ ಬಳಸಿ ಯಂತ್ರವನ್ನು ತುಂಡರಿಸಿ ಮೃತದೇಹವನ್ನು ಹೊರ ತೆಗೆಯಲಾಗಿದೆ.  ಗಿರಣಿ ಇಡೀ ರಕ್ತದಿಂದ ಕೆಂಪಾಗಿ ಹೋಗಿದ್ದು, ಭಯಂಕರವಾದ ದೃಶ್ಯ ಅಲ್ಲಿ ಕಂಡು ಬಂದಿತ್ತು.

ಮಗ ಎರಡು ತಿಂಗಳಿನಿಂದ ಗಿರಣಿಯಲ್ಲಿ ಮಗ ಕೆಲಸ ಮಾಡುತ್ತಿದ್ದನು. ಆತನ ತಂದೆ ದೆಹಲಿಯಲ್ಲಿ ಕೂಲಿ ಕೆಲಸ ಮಾಡ್ತಾರೆ. ಅವನೇ ಕೆಲಸ ಮಾಡೋದಾಗಿ ಹೇಳಿ ಇಲ್ಲಿ ಸೇರಿಕೊಂಡಿದ್ದನು ಎಂದು ಅಮಿತ್ ತಾಯಿ ರೇಖಾ ಹೇಳಿದ್ದಾರೆ.

ಘಟನೆ ಸಂಬಂಧ ಪೊಲೀಸರು ಗಿರಣಿ ಮಾಲಿಕ ರಮೇಶ್ ಮತ್ತು ತರುಣ್ ಕೊಲ್ವಾಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬವನ್ನು ಸಲಹುವ ಕನಸಿನಲ್ಲಿ ಗಿರಣಿಗೆ ಕಾಲಿಟ್ಟಿದ್ದ ಬಾಲಕ ದುರಂತವಾಗಿ ಸಾವಿಗೀಡಾಗಿದ್ದು, ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ.

ಇತ್ತೀಚಿನ ಸುದ್ದಿ