ಸಕ್ಕರೆ ನಿಮ್ಮ ದೇಹಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ನಮ್ಮ ದಿನ ನಿತ್ಯದ ಜೀವನದಲ್ಲಿ ಸಕ್ಕರೆ(Sugar)ಯನ್ನು ಹೆಚ್ಚಾಗಿ ಬಳಸುತ್ತೇವೆ. ಬೆಳಗ್ಗಿನಿಂದ ರಾತ್ರಿಯವರೆಗೆ ಸೇವಿಸುವ ಆಹಾರಗಳಲ್ಲಿ ಸಕ್ಕರೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತೇವೆ. ಆದರೆ ನಮ್ಮ ದೇಹಕ್ಕೆ ಸಕ್ಕರೆಯಿಂದ ಆಗುವ ದುಷ್ಪರಿಣಾಮ ಏನು ಎಂದು ತಿಳಿದುಕೊಳ್ಳೋಣ ಬನ್ನಿ…
ಸಕ್ಕರೆ ಬಳಕೆ ನಮ್ಮ ದೇಹದಲ್ಲಿ ಕೊಬ್ಬಿನಾಂಶ ಶೇಖರಣೆಯಾಗಲು ಕಾರಣವಾಗುತ್ತದೆ. ದೇಹದ ತೂಕ ಹೆಚ್ಚಾಗಲು ಸಕ್ಕರೆ ಪ್ರಮುಖ ಕಾರಣವಾಗಿದೆ. ಅತಿಯಾದ ಸಕ್ಕರೆ ಸೇವನೆಯಿಂದ ಹೊಟ್ಟೆ ಸುತ್ತಲು ಕೊಬ್ಬು ಹೆಚ್ಚಾಗುತ್ತದೆ.
ಸಕ್ಕರೆ ಸೇವನೆಯು ದೇಹವು ಇನ್ಸುಲಿನ್ ಗೆ ಕಡಿಮೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಟೈಪ್ 2 ಮಧುಮೇಹ ಮತ್ತು ಪಿಸಿಒಎಸ್ ನಂತಹ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ.
ಸಕ್ಕರೆ ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತು ಮತ್ತು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ರಕ್ತನಾಳಕ್ಕೆ ಹಾನಿಯುಂಟು ಮಾಡುತ್ತದೆ.
ಅತಿಯಾದ ಸಕ್ಕರೆ ಸೇವನೆ, ಜಂಕ್ ಫುಡ್ ಗಳ ಸೇವನೆ ಖಿನ್ನತೆಯನ್ನು ಪ್ರಚೋದಿಸುತ್ತದೆ. ಇದು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಸಕ್ಕರೆ ನಿಮ್ಮನ್ನು ಬೇಗನೇ ವೃದ್ಧಾಪ್ಯಕ್ಕೆ ದೂಡುತ್ತದೆ. ಚರ್ಮದ ಸುಕ್ಕು ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೈಡ್ರೇಟೆಡ್ ಚರ್ಮಕ್ಕೆ ಅಗತ್ಯವಾದ ಪ್ರೋಟೀನ್ ಗಳಾದ ಕೊಲ್ಯಾಜಿನ್ ಮತ್ತು ಎಲಾಸ್ಟಿನ್ ನ್ನು ಹಾನಿಗೊಳಿಸುತ್ತದೆ. ಇದು ಚರ್ಮದ ಸುಕ್ಕುಗಳಿಗೆ ಕಾರಣವಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಸಕ್ಕರೆಯ ವಸ್ತುಗಳನ್ನು ಸೇವಿಸಬಾರದು, ತಡರಾತ್ರಿ ಮಲಗುವ ಮೊದಲು ಸಕ್ಕರೆ ಸೇವನೆ ನಿದ್ರೆ ಭಂಗ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಕ್ಕರೆ ಸೇವನೆ ದೇಹಕ್ಕೆ ನಾನಾ ರೀತಿಯ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಸಕ್ಕರೆ ಬಳಕೆಯನ್ನು ಕಡಿಮೆ ಅಥವಾ ಸಕ್ಕರೆ ಬದಲು ಬೆಲ್ಲ, ಇನ್ನಿತರ ಪರ್ಯಾಯ ಸಿಹಿಯನ್ನು ಆಹಾರಗಳಲ್ಲಿ ಬಳಕೆ ಮಾಡಬಹುದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: