ಅಸ್ಪೃಶ್ಯತೆ ಜೀವಂತ: ಕೊಪ್ಪಳ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾತಿ ತಾರತಮ್ಯ ಆರೋಪ - Mahanayaka

ಅಸ್ಪೃಶ್ಯತೆ ಜೀವಂತ: ಕೊಪ್ಪಳ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾತಿ ತಾರತಮ್ಯ ಆರೋಪ

huligemma devi temple
26/10/2026

ಕೊಪ್ಪಳ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಅಸ್ಪೃಶ್ಯತೆಯ ಆಚರಣೆ ಜೀವಂತವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಲಿತ ಸಮುದಾಯಕ್ಕೆ ಸೇರಿದ ‘ಮಾತಂಗಿ ದೇವಿ’ ದರ್ಶನಕ್ಕೆ ಭಕ್ತರಿಗೆ ಹಠಾತ್ ನಿಷೇಧ ಹೇರಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಸಾಂಪ್ರದಾಯಿಕವಾಗಿ ಮೊದಲು ಮಾತಂಗಿ ದೇವಿಗೆ ಮೀಸಲು ಬುತ್ತಿ ಅರ್ಪಿಸಿ, ಸ್ನಾನ ಮಾಡಿದ ಬಳಿಕ ಹುಲಿಗೆಮ್ಮ ದೇವಿಯ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ, ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಕಾಶ್ ರಾವ್ ಅವರು ಮಾತಂಗಿ ದೇವಿ ದರ್ಶನಕ್ಕೆ ದಿಢೀರ್ ನಿಷೇಧ ಹೇರಿದ್ದಾರೆ ಎಂದು ದೂರಲಾಗಿದೆ.

ಈ ಕುರಿತು ಸ್ವತಃ ಮಾತಂಗಿ ದೇವಿ ದೇವಸ್ಥಾನದ ಅರ್ಚಕರು ಆಡಳಿತಾಧಿಕಾರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆಡಳಿತಾಧಿಕಾರಿಯ ನಿರ್ಧಾರದಿಂದ ದಲಿತರು ಸೇರಿದಂತೆ ಇತರ ಭಕ್ತರಿಗೆ ದರ್ಶನದ ಅವಕಾಶ ತಪ್ಪಿದ್ದು, ದೇವಸ್ಥಾನದಲ್ಲಿ ತಾರತಮ್ಯ ಆರಂಭವಾಗಿದೆ” ಎಂದು ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹಾಗೂ ಮುಜರಾಯಿ ಇಲಾಖೆಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆಡಳಿತಾಧಿಕಾರಿ ವಿರುದ್ಧ ತಕ್ಷಣವೇ ‘ಸುಮೊ ಮೋಟೊ’ (Sumo Moto) ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಈ ಘಟನೆಯು ಸ್ಥಳೀಯ ದಲಿತ ಸಂಘಟನೆಗಳು ಹಾಗೂ ಭಕ್ತಾದಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಮುಜರಾಯಿ ಸಚಿವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler