ಇಸ್ರೇಲ್ ವಿರುದ್ಧ ಪ್ರತೀಕಾರ: ಇರಾನ್ ಖಡಕ್ ಎಚ್ಚರಿಕೆ
ಇಸ್ರೇಲ್ ವಿರುದ್ಧ ಶೀಘ್ರವೇ ಪ್ರತೀಕಾರವನ್ನು ಕೈಗೊಳ್ಳುವುದಾಗಿ ಇರಾನ್ ಹೇಳಿದೆ. ಇಸ್ರೇಲ್ ಗೆ ತಕ್ಕುದಾದ ಪ್ರತಿಕ್ರಿಯೆ ನೀಡುವುದಕ್ಕೆ ತಯಾರಿ ನಡೆಯುತ್ತಿರುವುದಾಗಿ ಇರಾನ್ ಪರಮೋನ್ನತ ನಾಯಕ ಆಯತುಲ್ಲ ಕಾಮಿನೈ ಅವರ ವಕ್ತಾರರು ತಿಳಿಸಿದ್ದಾರೆ.
ಇಸ್ರೇಲ್ ನ ವಿರುದ್ಧ ಪ್ರತೀಕಾರ ತೀರಿಸುವುದು ಶತಸಿದ್ಧ ವಾಗಿದೆ. ಈ ಪ್ರತೀಕಾರಕ್ಕಾಗಿ ಆಯಾ ವಿಭಾಗಗಳು ತಯಾರಿ ನಡೆಸುತ್ತಿವೆ. ಇಸ್ರೇಲ್ ಗೆ ತಕ್ಕ ಉತ್ತರವನ್ನು ನಾವು ನೀಡುತ್ತೇವೆ ಎಂದು ಇರಾನ್ ಮಾಧ್ಯಮ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಆಲಿ ಲರಿ ಜಾನಿ ಹೇಳಿದ್ದಾರೆ.
ಇತ್ತೀಚೆಗೆ ಈ ಲರಿಜಾನಿಯವರು ಲೆಬನಾನ್ ಮತ್ತು ಸಿರಿಯಕ್ಕೆ ಭೇಟಿ ನೀಡಿದ್ದರು. ಕಾಮಿನೈ ಅವರ ಸಂದೇಶವನ್ನು ನೀಡುವುದಕ್ಕಾಗಿ ತಾನು ಅಲ್ಲಿಗೆ ಈ ಭೇಟಿ ನೀಡಿದೆ ಎಂದವರು ಬಹಿರಂಗಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj