ಇಸ್ರೇಲ್ ಮೇಲೆ ಕೆಂಗಣ್ಣು: 'ಶತ್ರುವನ್ನು ಮಣಿಸೋಣ' ಎಂದ ಇರಾನ್ ನ ಸರ್ವೋಚ್ಛ ನಾಯಕ - Mahanayaka

ಇಸ್ರೇಲ್ ಮೇಲೆ ಕೆಂಗಣ್ಣು: ‘ಶತ್ರುವನ್ನು ಮಣಿಸೋಣ’ ಎಂದ ಇರಾನ್ ನ ಸರ್ವೋಚ್ಛ ನಾಯಕ

04/10/2024


Provided by

ಇಸ್ರೇಲ್ ಮೇಲೆ ನೂರಾರು ಖಂಡಾಂತರ ಕ್ಷಿಪಣಿಗಳನ್ನು ಏಕಕಾಲಕ್ಕೆ ಉಡಾಯಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದ ಇರಾನ್‌, ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ‘ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ’ ಎಂದು ಘೋಷಿಸಿದ್ದಾರೆ.

5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಬೃಹತ್ ಧರ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಮೇನಿ,
ಇರಾನ್‌ ರಾಜಧಾನಿ ತೆಹರಾನ್‌ನಲ್ಲಿ ಲಕ್ಷ ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಿದರು.

ವಿಶ್ವಾದ್ಯಂತ ಇರುವ ಮುಸ್ಲಿಮರಿಗೆ ಶತ್ರುಗಳು ಇದ್ದಾರೆ. ನಾವೆಲ್ಲರೂ ಒಂದಾಗಿ ಸೇರಿ ಆ ಶತ್ರುವನ್ನು ಮಣಿಸಬೇಕು’ ಎಂದು ಇಸ್ರೇಲ್‌ನ ಹೆಸರು ಹೇಳದೆ ಸಮರದ ಕರೆ ನೀಡಿದರು.

ಇಸ್ಲಾಮಿಕ್ ರಿಪಬ್ಲಿಕ್ ದೇಶವಾದ ಇರಾನ್ ಕೆವು ದಿನಗಳ ಹಿಂದೆ ಇಸ್ರೇಲ್ ಮೇಲೆ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗಳನ್ನು ‘ಕಾನೂನುಬದ್ದ’ ಎಂದು ಪ್ರತಿಪಾದಿಸಿದ ಖಮೇನಿ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನೂ ‘ನ್ಯಾಯಸಮ್ಮತ’ ಎಂದು ಪ್ರತಿಪಾದಿಸಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ