ಯಮನಿನ ಹೂತಿಗಳಿಂದ ಮಿಸೈಲ್ ಪ್ರಯೋಗ: ಇಸ್ರೇಲ್ ಕಂಗಾಲು
ಯಮನಿನ ಹೂತಿಗಳು ನಿರಂತರವಾಗಿ ಪ್ರಯೋಗಿಸುತ್ತಿರುವ ಮಿಸೈಲ್ ಗಳಿಗೆ ಇಸ್ರೇಲ್ ಕಂಗಾಲಾಗಿದೆ. ಎಲ್ಲಿವರೆಗೆಂದರೆ ಇದೀಗ ಅಮೆರಿಕ ನೀಡಿರುವ ಮಿಸೈಲ್ ಪ್ರತಿರೋಧ ವ್ಯವಸ್ಥೆಯಾದ ತಾಡನ್ನು ಸ್ಥಾಪಿಸಿದೆ. ಈಗಾಗಲೇ ಮಿಸೈಲ್ ಗಳನ್ನು ತಡೆಯುವುದಕ್ಕಾಗಿ ಇಸ್ರೇಲ್ ಆಯರ್ನ್ ಡೋಮ್ ಅನ್ನು ಸ್ಥಾಪಿಸಿತ್ತು. ಆದರೆ ಹೂತಿಗಳು ಅದನ್ನು ಮೀರಿ ಮಿಸೈಲ್ ಪ್ರಯೋಗಿಸಲು ಯಶಸ್ವಿಯಾಗುತ್ತಿರುವುದರಿಂದ ಇದೀಗ ಅಮೆರಿಕಾದ ತಾಡ್ ಮಿಸೈಲ್ ಪ್ರತಿರೋಧ ವ್ಯವಸ್ಥೆಯನ್ನು ಸ್ಥಾಪಿಸಿದೆ.
ಅಕ್ಟೋಬರ್ ನಲ್ಲಿ ಇರಾನ್ ಬ್ಯಾಲೆಸ್ಟಿಕ್ ಮಿಸೈಲ್ ಆಕ್ರಮಣವನ್ನು ಪ್ರಾರಂಭಿಸುವುದರೊಂದಿಗೆ ಅಮೆರಿಕ ಇಸ್ರೇಲ್ ಗೆ ತಾಡ್ ವ್ಯವಸ್ಥೆಯನ್ನು ಮಾರಾಟ ಮಾಡಿತ್ತು. ಆ ಬಳಿಕ ದಿಂದಲೂ ಇಸ್ರೇಲ್ ಅದನ್ನು ಉಪಯೋಗಿಸಿರಲಿಲ್ಲ. ಇದೀಗ ಹೂತಿಗಳ ಆಕ್ರಮಣ ತಡೆಯಲಾರದೆ ಅದನ್ನು ಸ್ಥಾಪಿಸಿದೆ. ದಿನದ ಹಿಂದೆ ಹೂತಿಗಳು ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಇಸ್ರೇಲ್ ನತ್ತ ಹಾರಿಸಿದ್ದು ಅದನ್ನು ಈ ತಾಡ್ ಯಶಸ್ವಿಯಾಗಿ ತಡೆದಿದೆ ಎಂದು ಹೇಳಲಾಗಿದೆ. ಇದರ ದೃಶ್ಯವನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ.
ಇದೇವೇಳೆ ಗಾಝಾದ ಕಮಲ್ ಅದ್ವಾನ್ ಆಸ್ಪತ್ರೆಗೆ ಬೆಂಕಿ ಇಟ್ಟ ಇಸ್ರೇಲ್ ನ ಕ್ರೂರತೆಯನ್ನು ಜಾಗತಿಕವಾಗಿ ಖಂಡಿಸಲಾಗಿದೆ ಇದರಿಂದಾಗಿ ಸಾವಿರಾರು ಜನರ ಆರೋಗ್ಯವನ್ನು ಪಣಕ್ಕೊಡ್ಡಲಾಗಿದೆ ಎಂದು ಹೇಳಲಾಗಿದೆ. ಇಸ್ರೇಲ್ ಸೈನಿಕರು ಈ ಆಸ್ಪತ್ರೆಗೆ ನುಗ್ಗಿದ್ದಲ್ಲದೆ ಬಲವಂತವಾಗಿ ಅಲ್ಲಿನ ರೋಗಿಗಳನ್ನು ಮತ್ತು ವೈದ್ಯರನ್ನು ಹೊರತಳ್ಳಿ ಆಸ್ಪತ್ರೆಗೆ ಬೀಗ ಜಡಿದಿದ್ದಾರೆ. ಆ ಬಳಿಕ ಈ ಆಸ್ಪತ್ರೆಗೆ ಬೆಂಕಿ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ತೀವ್ರ ಚಳಿ ಇರುವ ಈ ಸಂದರ್ಭದಲ್ಲಿ ರೋಗಿಗಳನ್ನು ಹೀಗೆ ಹೊರಕ್ಕಟ್ಟಿರುವುದು ಅವರನ್ನು ಬಹಿರಂಗ ಸಾವಿಗೆ ದೂಡಿದಂತಾಗಿದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj