ಯುಎಇ ನಾಗರಿಕರು ವಿವಾಹಕ್ಕಿಂತ ಮೊದಲು ಜೆನೆಟಿಕ್ ಪರೀಕ್ಷೆ ಮಾಡೋದು ಕಡ್ಡಾಯ - Mahanayaka

ಯುಎಇ ನಾಗರಿಕರು ವಿವಾಹಕ್ಕಿಂತ ಮೊದಲು ಜೆನೆಟಿಕ್ ಪರೀಕ್ಷೆ ಮಾಡೋದು ಕಡ್ಡಾಯ

28/12/2024

ಯುಎಇ ನಾಗರಿಕರು ವಿವಾಹಕ್ಕಿಂತ ಮೊದಲು ಜೆನೆಟಿಕ್ ಪರೀಕ್ಷೆ ನಡೆಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಮಕ್ಕಳಲ್ಲಿ ಜೈವಿಕ ವೈಕಲ್ಯ ಇಲ್ಲದಂತೆ ಮಾಡುವುದು ಇದರ ಗುರಿಯಾಗಿದೆ. ಜೆನೆಟಿಕ್ ಕಾಯಿಲೆಗಳು ಮುಂದಿನ ತಲೆಮಾರಿಗೆ ವರ್ಗಾವಣೆಯಾಗದಂತೆ ತಡೆಯುವ ಉದ್ದೇಶದಿಂದ ಜೆನೆಟಿಕ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ವಿವಾಹಕ್ಕಿಂತ ಮೊದಲು ಮೆಡಿಕಲ್ ಪರೀಕ್ಷೆ ನಡೆಸುವುದು ಈಗಾಗಲೇ ಕಡ್ಡಾಯ ನಿಯಮವಾಗಿ ಜಾರಿಯಲ್ಲಿದೆ. ಆದರೆ ಜೆನೆಟಿಕ್ ಪರೀಕ್ಷೆಯನ್ನು ಕಡ್ಡಾಯ ಮಾಡಲಾಗಿರಲಿಲ್ಲ ಅದು ಐಚ್ಚಿಕವಾಗಿತ್ತು. ಇದೀಗ ಅದನ್ನು ಕೂಡ ಕಡ್ಡಾಯ ಮಾಡಲಾಗಿದೆ. ಜನವರಿ ಒಂದರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ