ನೆತನ್ಯಾಹು ವಿರುದ್ಧ ಬಂಧನ ವಾರಂಟ್ ವಿಚಾರ: ಐಸಿಸಿಗೆ ಪತ್ರ ಬರೆದ ಇಸ್ರೇಲ್ ಹೇಳಿದ್ದೇನು? - Mahanayaka

ನೆತನ್ಯಾಹು ವಿರುದ್ಧ ಬಂಧನ ವಾರಂಟ್ ವಿಚಾರ: ಐಸಿಸಿಗೆ ಪತ್ರ ಬರೆದ ಇಸ್ರೇಲ್ ಹೇಳಿದ್ದೇನು?

28/11/2024

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ನ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರ ಬಂಧನ ವಾರಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ಐಸಿಸಿ) ಪತ್ರ ಬರೆದಿದೆ.

ಕಳೆದ ವಾರ ಹೊರಡಿಸಲಾದ ಬಂಧನ ವಾರಂಟ್ ಗಳ ಅನುಷ್ಠಾನವನ್ನು ವಿಳಂಬಗೊಳಿಸುವಂತೆ ಇಸ್ರೇಲ್ ವಿನಂತಿಸಿದೆ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಂಧನ ವಾರಂಟ್ ಗಳನ್ನು ಹೊರಡಿಸಲು ಯಾವುದೇ ವಾಸ್ತವಿಕ ಅಥವಾ ಕಾನೂನು ಆಧಾರವಿಲ್ಲ ಎಂದು ಇಸ್ರೇಲ್ ಮೇಲ್ಮನವಿ ಪತ್ರ ವಿವರವಾಗಿ ಬಹಿರಂಗಪಡಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಐಸಿಸಿಯ ಅಧಿಕಾರ ಮತ್ತು ಬಂಧನ ವಾರಂಟ್ ಗಳ ನ್ಯಾಯಸಮ್ಮತತೆಯನ್ನು ಇಸ್ರೇಲ್ ನಿರಾಕರಿಸುತ್ತದೆ” ಎಂದು ಅದು ಹೇಳಿದೆ.

ಗಾಝಾದಲ್ಲಿ ಕನಿಷ್ಠ ಅಕ್ಟೋಬರ್ 8, 2023 ಮತ್ತು ಮೇ 20, 2024 ರ ನಡುವೆ “ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧ ಅಪರಾಧಗಳನ್ನು” ಮಾಡಿದ ಆರೋಪದ ಮೇಲೆ ನೆತನ್ಯಾಹು ಮತ್ತು ಗ್ಯಾಲಂಟ್ ವಿರುದ್ಧ ಐಸಿಸಿ ಬಂಧನ ವಾರಂಟ್ ಹೊರಡಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ