15 ವರ್ಷ ವಯಸ್ಸಿನ ಫೆಲೆಸ್ತೀನಿ ಬಾಲಕನಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿದ ಇಸ್ರೇಲ್ ನ್ಯಾಯಾಲಯ - Mahanayaka

15 ವರ್ಷ ವಯಸ್ಸಿನ ಫೆಲೆಸ್ತೀನಿ ಬಾಲಕನಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿದ ಇಸ್ರೇಲ್ ನ್ಯಾಯಾಲಯ

20/02/2025


Provided by

15 ವರ್ಷ ವಯಸ್ಸಿನ ಫೆಲೆಸ್ತೀನಿ ಬಾಲಕನಿಗೆ ಇಸ್ರೇಲ್ ನ್ಯಾಯಾಲಯ 18 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದೆ. ಪಶ್ಚಿಮ ದಂಡೆಯಲ್ಲಿ ನಡೆದ ಒಂದು ಆಕ್ರಮಣದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಿ ಮೊಹಮ್ಮದ್ ಬಾಸಿಲ್ ಸಲ್ಬಾನ್ ಎಂಬ ಬಾಲಕನಿಗೆ ಜೆರುಸಲೇಂನ ಜಿಲ್ಲಾ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಅಲ್ಲದೆ 72,31,000 ರೂಪಾಯಿ ದಂಡವನ್ನೂ ವಿಧಿಸಿದೆ.


Provided by

2023ರ ಫೆಬ್ರವರಿ 13ರಂದು, ಪೂರ್ವ ಜೆರುಸಲೆಮ್‌ನ ಶುಫತ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲಿ ಸೇನೆಯ ದಾಳಿಯನ್ನು ವಿರೋಧಿಸಿದ್ದಕ್ಕಾಗಿ ಸಲ್ಬಾನಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಫತ್ ಶಿಬಿರದ ಚೆಕ್‌ಪಾಯಿಂಟ್‌ನಲ್ಲಿ ಇಸ್ರೇಲಿ ಸೈನಿಕನೊಬ್ಬನ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂದು ಇಸ್ರೇಲ್ ಆರೋಪಿಸಿದೆ. ಈ ಮೊದಲು, 13ನೇ ವಯಸ್ಸಿನಲ್ಲಿ ಅವರನ್ನು ಬಂಧಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಫೆಲೆಸ್ತೀನ್ ಪ್ರಿಸನರ್ ಸೊಸೈಟಿಯ ಪ್ರಕಾರ, 1,115 ಮಕ್ಕಳು ಸೇರಿದಂತೆ ಕನಿಷ್ಠ 14,500 ಫೆಲೆಸ್ತೀನಿಯರು ಪ್ರಸ್ತುತ ಇಸ್ರೇಲಿ ಜೈಲುಗಳಲ್ಲಿ ಬಂಧಿತರಾಗಿದ್ದಾರೆ. ಅಕ್ಟೋಬರ್ 7, 2023 ರಂದು ಗಾಜಾ ಯುದ್ಧ ಆರಂಭವಾದ ನಂತರ, ಇಸ್ರೇಲಿ ಸೇನೆಯ ದಾಳಿ ಮತ್ತು ವಸಾಹತುಗಾರರ ಹಿಂಸೆ ಹೆಚ್ಚಾಗಿದೆ.


Provided by

ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಅಂತರರಾಷ್ಟ್ರೀಯ ಸಮುದಾಯ ಈ ಶಿಕ್ಷೆಯನ್ನು ತೀವ್ರವಾಗಿ ಟೀಕಿಸಿದೆ. 15 ವರ್ಷದ ಬಾಲಕನಿಗೆ 18 ವರ್ಷಗಳ ಶಿಕ್ಷೆ ವಿಧಿಸುವುದು ನ್ಯಾಯಸಮ್ಮತವೇ ಎಂಬ ಪ್ರಶ್ನೆಗಳು ಎದುರಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ