ಭಾರತ ಮುಸ್ಲಿಂ ರಾಷ್ಟ್ರ ಆಗುತ್ತೆ ಎಂಬ ವದಂತಿ: ವಾದ ತಿರಸ್ಕರಿಸಿದ ಪಾಪುಲೇಷನ್ ಫೌಂಡೇಶನ್ ಆಫ್ ಇಂಡಿಯಾ

ಭಾರತೀಯ ಮುಸ್ಲಿಮರ ಜನಸಂಖ್ಯೆಯು ಹಿಂದುಗಳ ಜನಸಂಖ್ಯೆಗಿಂತ ಅಧಿಕವಾಗಲಿದೆ ಮತ್ತು ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ ವಾದವನ್ನು ಪಾಪುಲೇಷನ್ ಫೌಂಡೇಶನ್ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಪೂನಮ್ ಮಟ್ಟೇರಿಯಾ ಅವರು ತಳ್ಳಿ ಹಾಕಿದ್ದಾರೆ.
ಭಾರತೀಯ ಮುಸ್ಲಿಮರ ಜನಸಂಖ್ಯೆ ಆರಂಭದಲ್ಲಿ ಹೆಚ್ಚಿತ್ತಾದರೂ ನಿಧಾನಕ್ಕೆ ಫಲವತ್ತತೆಯ ಪ್ರಮಾಣ ತೀರಾ ಕುಸಿಯುತ್ತಾ ಬಂದಿದೆ. ಇದಕ್ಕೆ ಶಿಕ್ಷಣ ಆರ್ಥಿಕ ಸಬಲೀಕರಣವು ಕಾರಣವಾಗಿದೆ ಎಂದವರು ಹೇಳಿದ್ದಾರೆ.
ಈ ಹಿಂದೆ ಮುಸ್ಲಿಮರ ಜನನ ಅನುಪಾತ ಹೆಚ್ಚಾಗಿರುವುದಕ್ಕೆ ಶೈಕ್ಷಣಿಕ ಕೊರತೆ ಮತ್ತು ಬಡತನ ಕಾರಣವಾಗಿತ್ತು. ಇತ್ತೀಚಿನ ಅಂಕಿ ಅಂಶಗಳಂತೆ ಮುಸ್ಲಿಮರ ಫಲವತ್ತತೆಯ ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ಕೇರಳದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ಅಲ್ಲಿ ಎರಡೂ ಸಮುದಾಯಗಳ ಫಲವತ್ತತೆಯ ಪ್ರಮಾಣ ಸಮಾನವಾಗಿದೆ ಎಂದವರು ಹೇಳಿದ್ದಾರೆ.
ಇದೇ ವೇಳೆ ಬಿಹಾರದಲ್ಲಿ ಹಿಂದುಗಳ ಫಲವತ್ತತೆಯ ಪ್ರಮಾಣ ತುಂಬಾ ಅಧಿಕವಿದೆ ಇದಕ್ಕೆ ಕಾರಣ ಬಡತನ ಮತ್ತು ಶಿಕ್ಷಣದ ಕೊರತೆಯಾಗಿದೆ. ಜನಸಂಖ್ಯೆಯ ಹೆಚ್ಚಳಕ್ಕೆ ಧರ್ಮ ಕಾರಣವಾಗಿಲ್ಲ. ಅದರ ಬದಲು ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಯೇ ಮುಖ್ಯ ಕಾರಣ ಎಂದವರು ಹೇಳಿದ್ದಾರೆ. ಇದೇ ವೇಳೆ ಮುಸ್ಲಿಮರ ಜನಸಂಖ್ಯೆ ಎಂದು ಕೂಡ ಹಿಂದೂ ಜನಸಂಖ್ಯೆಯನ್ನು ಮೀರಲು ಸಾಧ್ಯವೇ ಇಲ್ಲ ಎಂದು ಹೇಳಿದ ಅವರು ಒಮ್ಮೆ ಫಲವತ್ತತೆಯ ಪ್ರಮಾಣ ಕುಸಿದರೆ ಆ ಬಳಿಕ ಎಂದೂ ಕೂಡ ಅದು ಹೆಚ್ಚಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj