ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಹರಸಾಹಸ: ಕದನ ವಿರಾಮಕ್ಕೆ ನೆತನ್ಯಾಹುಗೆ ಇಸ್ರೇಲಿ ಸೇನೆ, ರಕ್ಷಣಾ ಸಚಿವರ ಒತ್ತಡ
ಇಸ್ರೇಲಿನಿಂದ ದಿನಾಲೂ ಭಿನ್ನ ಸುದ್ದಿಗಳು ವರದಿಯಾಗುತ್ತಿವೆ. ಯುದ್ಧದಿಂದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಸೈನಿಕರು ಆಶಾವಾದವನ್ನು ಕಳಕೊಂಡಿದ್ದಾರೆ ಎಂದು ಇಸ್ರೇಲಿ ಸೇನೆಯ ದಂಡನಾಯಕ ಮತ್ತು ಇಸ್ರೇಲಿನ ರಕ್ಷಣಾ ಸಚಿವರು ಪ್ರಧಾನಿ ನೆತನ್ಯಾಹು ಮೇಲೆ ಒತ್ತಡ ಹಾಕಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಇಸ್ರೇಲಿ ಸೇನೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಷಿ ಹಲೇವಿ ಅವರು ಕದನ ವಿರಾಮ ಏರ್ಪಡಿಸುವುದಕ್ಕೆ ನೆತನ್ಯಾಹು ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಇಸ್ರೇಲಿನ ಪತ್ರಿಕೆ ಜೆರುಸಲೇಂ ಪೋಸ್ಟ್ ವರದಿ ಮಾಡಿದೆ.
ಗಾಝಾ ಮತ್ತು ಲೆಬನಾನ್ ನಲ್ಲಿ ಕದನ ವಿರಾಮ ಏರ್ಪಡಿಸಬೇಕು ಎಂದು ಇಸ್ರೇಲ್ ನ ರಕ್ಷಣಾ ಸಚಿವಾಲಯ ಆಗ್ರಹಿಸುತ್ತದೆ ಎಂಬ ಒಕ್ಕಣೆಯ ಪತ್ರವನ್ನು ಅವರಿಗೆ ಸಲ್ಲಿಸಲಾಗಿದೆ.
ದಿನೇ ದಿನೇ ಯೋಧರು ಸಾವಿಗಿಡಾಗುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ನು ದೊಡ್ಡದೇನನ್ನೂ ಸಾಧಿಸುವುದಕ್ಕೆ ಇದೆ ಎಂದು ತೋರುತ್ತಿಲ್ಲ. ಗಾಝಾದಲ್ಲಿ ಇಸ್ರೇಲ್ ಒತ್ತೆಯಾಳಾಗಿ ಇಟ್ಟುಕೊಂಡಿರುವ 101 ಮಂದಿಯನ್ನು ಇಸ್ರೇಲಿಗೆ ಮರಳಿ ಕರೆತರಬೇಕಾದರೆ ಕದನ ವಿರಾಮ ನಡೆಸುವುದೊಂದೇ ಪರಿಹಾರ ಎಂದು ರಕ್ಷಣಾ ಇಲಾಖೆ ಹೇಳಿದೆ.
ದಿನದ ಹಿಂದೆ ಲೆಬನಾನ್ ನಡೆಸಿದ ರಾಕೆಟ್ ದಾಳಿಯಲ್ಲಿ ಏಳು ಮಂದಿ ಇಸ್ರೇಲ್ ನಾಗರಿಕರು ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಇಸ್ರೇಲಿ ಯೋಧರು ಸಾವನ್ನಪ್ಪಿರುವುದು ಸೇನೆಯಲ್ಲಿ ಆತಂಕವನ್ನು ಹುಟ್ಟುಹಾಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj