ಸಿದ್ದರಾಮಯ್ಯನವರ ಕುತಂತ್ರ, ದೇವೇಗೌಡರ ಮಾತಿಗೆ ಕಟ್ಟುಬಿದ್ದು ನನ್ನ ವರ್ಚಸ್ಸು, ಹೆಸರು ಕಳೆದುಕೊಂಡೆ | ಕುಮಾರಸ್ವಾಮಿ ಪಶ್ಚಾತಾಪ - Mahanayaka

ಸಿದ್ದರಾಮಯ್ಯನವರ ಕುತಂತ್ರ, ದೇವೇಗೌಡರ ಮಾತಿಗೆ ಕಟ್ಟುಬಿದ್ದು ನನ್ನ ವರ್ಚಸ್ಸು, ಹೆಸರು ಕಳೆದುಕೊಂಡೆ | ಕುಮಾರಸ್ವಾಮಿ ಪಶ್ಚಾತಾಪ

05/12/2020

ಮೈಸೂರು: ಸಿದ್ದರಾಮಯ್ಯನವರ ಕುತಂತ್ರ ಹಾಗೂ ಹೆಚ್.ಡಿ.ದೇವೇಗೌಡರ ಭಾವನಾತ್ಮಕ ಮಾತಿಗೆ ಕಟ್ಟು ಬಿದ್ದು, ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ನನ್ನ ಹೆಸರನ್ನು ಕೆಡಿಸಿಕೊಂಡೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಶ್ಚಾತಾಪಪಟ್ಟಿದ್ದಾರೆ.

ನಾನು ಅವರ ಮಾತುಗಳನ್ನು ಕೇಳದೆ ಬೇರೆ ನಿರ್ಧಾರ ತೆಗೆದುಕೊಂಡಿದ್ದರೆ, ಈಗಲೂ ಮುಖ್ಯಮಂತ್ರಿಯಾಗಿರುತ್ತಿದೆ.  2006ರಲ್ಲಿ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ನನಗೆ ಒಳ್ಳೆಯ ಹೆಸರಿತ್ತು. ಆದರೆ ನನ್ನ ಹೆಸರು ಕೆಡಿಸಲೆಂದೇ ಕಾಂಗ್ರೆಸ್ ಹೆಣೆದ ಬಲೆಗೆ ಸಿಲುಕಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.


Provided by

ದೇವೇಗೌಡರಿಗೆ ನೋವು ಮಾಡಬಾರದು ಎಂಬ ಕಾರಣಕ್ಕಾಗಿ ನಾನು ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿದೆ. ಇದರಿಂದಾಗಿ ನನ್ನ ವರ್ಚಸ್ಸು, ಹೆಸರು ಸರ್ವನಾಶವಾಯಿತು ಎಂದು ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯನವರು ಕದ್ದುಮುಚ್ಚಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ವಿಚಾರ ನನಗೆ ಗೊತ್ತು.  ಹೀಗಾಗಿಯೇ ಯಡಿಯೂರಪ್ಪನವರ ಬದಲಾವಣೆಯ ಬಗ್ಗೆ ಅವರಿಗೆ ಮಾಹಿತಿ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.

 

ಇತ್ತೀಚಿನ ಸುದ್ದಿ