ಬ್ರೇಕಿಂಗ್ ನ್ಯೂಸ್: ಮಾಜಿ ಸಚಿವ ರೋಷನ್ ಬೇಗ್ ಗೆ ಜಾಮೀನು - Mahanayaka

ಬ್ರೇಕಿಂಗ್ ನ್ಯೂಸ್: ಮಾಜಿ ಸಚಿವ ರೋಷನ್ ಬೇಗ್ ಗೆ ಜಾಮೀನು

05/12/2020

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ.

ಐಎಂಎ ಹಗರಣ ಪ್ರಕರಣದಲ್ಲಿ ಐಎಂಎ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್‍ಖಾನ್ ಅವರು ರೋಷನ್ ಬೇಗ್ ಅವರಿಗೆ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಪ್ರಮುಖ ಆರೋಪಿಯ ಹೇಳಿಕೆ ಆಧರಿಸಿ ನ.23ರಂದು ಕೂಲ್ಸ್‍ಪಾರ್ಕ್‍ನಲ್ಲಿರುವ ರೋಷನ್ ಬೇಗ್ ಅವರ ಮನೆಯಲ್ಲಿ ಶೋಧಕಾರ್ಯಚರಣೆ ನಡೆಸಿ ನಂತರ ಬಂಧಿಸಿತ್ತು.

ಬಂಧನದ ಬಳಿಕ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ನೀಡಿತ್ತು. ಆದರೆ, ಈ ಸಂದರ್ಭದಲ್ಲಿ ಅನಾರೋಗ್ಯ ಹಿನ್ನೆಲೆಲ್ಲಿ  ರೋಷನ್ ಬೇಗ್ ಅವರನ್ನು ಹೃದ್ರೋಗ ಆಸ್ಪತ್ರೆ ಜಯದೇವಕ್ಕೆ ದಾಖಲಿಸಲಾಗಿತ್ತು. ಈ ನಡುವೆ ರೋಷನ್‍ಬೇಗ್ ಪರ ವಕೀಲರು ಆರೋಗ್ಯದ ಕಾರಣ ಮುಂದಿಟ್ಟು ಜಾಮೀನು ನೀಡುವಂತೆ ಮನವಿ ಮಾಡಿತ್ತು. ಸಿಬಿಐ ಕಸ್ಟಡಿ ಮುಗಿದ ಬಳಿಕ ಜಾಮೀನು ಅರ್ಜಿ ಪರಿಗಣಿಸುವುದಾಗಿ ಡಿ.2ರಂದು ನ್ಯಾಯಾಲಯ ಹೇಳಿತ್ತು. ಅದರಂತೆ ಇಂದು ಜಾಮೀನು ನೀಡಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ