ವಿಜ್ಞಾನಿಗಳನ್ನು ಬಳಸಿಕೊಂಡು ಜೆಫ್ರಿ ಎಪ್ಸ್ಟೀನ್ ಹೊಸ ಮಾನವ ತಳಿ ಸೃಷ್ಟಿಸಲು ಯತ್ನಿಸಿದ್ದ! | ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ!
ವಿಶ್ವದಾದ್ಯಂತ ಕುಖ್ಯಾತಿ ಪಡೆದಿರುವ ಅಮೆರಿಕದ ಉದ್ಯಮಿ ಜೆಫ್ರಿ ಎಪ್ಸ್ಟೀನ್ ಕೇವಲ ಲೈಂಗಿಕ ಅಪರಾಧಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ, ಬದಲಿಗೆ ವಿಜ್ಞಾನ ಲೋಕದ ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಆತನ ಖಾಸಗಿ ದ್ವೀಪದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಮತ್ತು ಆತ ಹೊಂದಿದ್ದ ‘ಹೊಸ ಮಾನವ ತಳಿ’ಯ ಹುಚ್ಚು ಯೋಜನೆಗಳು ಈಗ ಜಗತ್ತನ್ನು ಬೆಚ್ಚಿಬೀಳಿಸಿವೆ.
ವಿಶ್ವವಿಖ್ಯಾತ ವಿಜ್ಞಾನಿಗಳೊಂದಿಗೆ ನಂಟು:
ಎಪ್ಸ್ಟೀನ್ ಕೇವಲ ರಾಜಕಾರಣಿಗಳನ್ನಷ್ಟೇ ಅಲ್ಲದೆ, ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್, ನೋಬೆಲ್ ಪ್ರಶಸ್ತಿ ವಿಜೇತ ಮುರ್ರೆ ಗೆಲ್–ಮನ್, ವಿಕಾಸವಾದಿ ಜೀವವಿಜ್ಞಾನಿ ಸ್ಟೀಫನ್ ಜೇ ಗೌಲ್ಡ್ ಮತ್ತು ಜೆನೆಟಿಕ್ ಎಂಜಿನಿಯರ್ ಜಾರ್ಜ್ ಚರ್ಚ್ ಅಂತಹ ದಿಗ್ಗಜರೊಂದಿಗೆ ಸಂಪರ್ಕ ಹೊಂದಿದ್ದನು. ಹಾರ್ವರ್ಡ್ ವಿಶ್ವವಿದ್ಯಾನಿಲಯದಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡುವ ಮೂಲಕ ಆತ ವಿಜ್ಞಾನ ಲೋಕದ ಮೇಲೆ ಪ್ರಭಾವ ಬೀರಿದ್ದನು.
‘ಮಾನವ ಸಂತಾನೋತ್ಪತ್ತಿ ಫಾರ್ಮ್’ :
ಮೆಕ್ಸಿಕೋದಲ್ಲಿನ ತನ್ನ ಬೃಹತ್ ಆಸ್ತಿಯಲ್ಲಿ ಎಪ್ಸ್ಟೀನ್ ಒಂದು ‘ಮಾನವ ಫಾರ್ಮ್’ ನಿರ್ಮಿಸಲು ಯೋಜಿಸಿದ್ದನು. ಈ ಯೋಜನೆಯ ಪ್ರಕಾರ, ಆತ ಸುಮಾರು 20 ಮಹಿಳೆಯರನ್ನು ನಿರಂತರವಾಗಿ ಗರ್ಭಿಣಿಯನ್ನಾಗಿ ಇರಿಸಲು ಬಯಸಿದ್ದನು. ಈ ಮಹಿಳೆಯರಿಗೆ ಜಗತ್ತಿನ ಬುದ್ಧಿವಂತ ವಿಜ್ಞಾನಿಗಳ ಮತ್ತು ತನ್ನದೇ ಆದ DNA ಹೊಂದಿರುವ ವೀರ್ಯವನ್ನು ಇಂಜೆಕ್ಟ್ ಮಾಡುವ ಮೂಲಕ ‘ಉನ್ನತ ಮಟ್ಟದ ಬುದ್ಧಿವಂತ ಮಾನವ ಜನಾಂಗ’ವನ್ನು ಸೃಷ್ಟಿಸುವುದು ಆತನ ಕ್ರೂರ ಗುರಿಯಾಗಿತ್ತು.
ಸಾವನ್ನು ಗೆಲ್ಲುವ ತವಕ:
ತನ್ನ ಸಾವಿನ ನಂತರವೂ ಪುನಃ ಜೀವ ಪಡೆಯಬೇಕೆಂಬ ಹಂಬಲ ಎಪ್ಸ್ಟೀನ್ ಗಿತ್ತು. ಇದಕ್ಕಾಗಿ ಆತ ‘ಕ್ರಯೋನಿಕ್ಸ್’ ತಂತ್ರಜ್ಞಾನವನ್ನು ನಂಬಿದ್ದನು. ತನ್ನ ದೇಹವನ್ನು, ಅದರಲ್ಲೂ ಮುಖ್ಯವಾಗಿ ಮೆದುಳು ಮತ್ತು ಜನನಾಂಗಗಳನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಸಂರಕ್ಷಿಸಿಡಲು (Preservation) ಆತ ಸಿದ್ಧತೆ ನಡೆಸಿದ್ದನು. ಭವಿಷ್ಯದ ತಂತ್ರಜ್ಞಾನದ ಮೂಲಕ ತಾನು ಮತ್ತೆ ಬದುಕಬಹುದು ಎಂದು ಆತ ನಂಬಿದ್ದನು. ಅಂದ ಹಾಗೆ, ದೇಹವನ್ನು ಸಂರಕ್ಷಿಸುವ ಈ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾಗಿದ್ದು, ಇದರಲ್ಲಿ ಫ್ರೀಜಿಂಗ್ ಸಮಸ್ಯೆಗಳು, ಅಂಗಾಂಗಗಳ ಹಾನಿ ಮತ್ತು ಪುನಶ್ಚೇತನದ ಅನಿಶ್ಚಿತತೆಯಂತಹ ಪ್ರಮುಖ ಸವಾಲುಗಳಿವೆ.
ಶ್ರೀಮಂತಿಕೆ ಮತ್ತು ಅಧಿಕಾರದ ಮದದಿಂದ ಎಪ್ಸ್ಟೀನ್ ಪ್ರಕೃತಿಯ ನಿಯಮಗಳನ್ನೇ ಮೀರಿ ಹೊಸ ಜಗತ್ತನ್ನು ಸೃಷ್ಟಿಸಲು ಹೊರಟಿದ್ದನು ಜೆಫ್ರಿ ಎಪ್ಸ್ಟೀನ್. ವಿಜ್ಞಾನವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಯತ್ನಿಸಿದ ಈತನ ಕರಾಳ ಮುಖಗಳು ಈಗ ಒಂದೊಂದಾಗಿ ಜಗತ್ತಿನ ಮುಂದೆ ಅನಾವರಣಗೊಳ್ಳುತ್ತಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























