ಜಿರಾಫೆಯ ಹೃದಯ ಬಗೆದು ಪತಿಗೆ ವ್ಯಾಲೆಂಟೈನ್ ಡೇ ಗಿಫ್ಟ್ ನೀಡಿದ ಯುವತಿ - Mahanayaka

ಜಿರಾಫೆಯ ಹೃದಯ ಬಗೆದು ಪತಿಗೆ ವ್ಯಾಲೆಂಟೈನ್ ಡೇ ಗಿಫ್ಟ್ ನೀಡಿದ ಯುವತಿ

24/02/2021

ದಕ್ಷಿಣ ಆಫ್ರಿಕಾ:  ವ್ಯಾಲೆಂಟೈನ್ ಡೇಯಂದ ಯುವತಿಯೋರ್ವಳು ತನ್ನ ಪತಿಗೆ ಜಿರಾಫೆಯ ಹೃದಯವನ್ನು ನೀಡುವ ಮೂಲಕ ವಿವಾದಕ್ಕೀಡಾಗಿದ್ದು, ಜಿರಾಫೆಯನ್ನು ಬೇಟೆಯಾಡಿಕೊಂದು ಅದರ ಹೃದಯವನ್ನು ಬಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಈಕೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾಳೆ.

ಮರಲಿಯಾಜ್ ವ್ಯಾನ್ ಡರ್ ಮೆರವ್  ಈ ಬೇಟೆಗಾರ್ತಿಯಾಗಿದ್ದು, ಈಕೆಯ ಈ ಹವ್ಯಾಸ ವಿರುದ್ಧ ಪ್ರಾಣಿಪ್ರಿಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿರಾಫೆಯನ್ನು ಕೊಂದು, ಹೃದಯ ಬಗೆದು ಇದು ನನ್ನ ವ್ಯಾಲೆಂಟೈನ್ ಗಿಫ್ಟ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಫೋಟೋ ಶೇರ್ ಮಾಡಿದ್ದಾಳೆ.

ಪ್ರಾಣಿಗಳನ್ನು ಹತ್ಯೆ ಮಾಡುವುದರ ಬಗ್ಗೆ ಈ ಬೇಟೆಗಾರ್ತಿಗೆ ಯಾವುದೇ ಮಾನವೀಯತೆ ಇಲ್ಲ. ಈ ಹಿಂದೆಯೂ ಈಕೆ ಅನೇಕ ಪ್ರಾಣಿಗಳನ್ನು ಕೊಂದು ಪೋಸ್ಟ್ ಹಾಕಿಕೊಂಡಿದ್ದಾಳೆ.  ಕಾಡು ಪ್ರಾಣಿಗಳನ್ನು ಕೊಲ್ಲುವುದೇ ಅಪರೂಪ. ಆದರೆ ಈ ಮಹಿಳೆ ತನ್ನ ಮೋಜಿಗಾಗಿ ಪ್ರಾಣಿಗಳನ್ನು ಹತ್ಯೆ ಮಾಡುತ್ತಿದ್ದಾಳೆ.

 

ಇತ್ತೀಚಿನ ಸುದ್ದಿ