ಕಡಬ ಚರ್ಚ್ ದಾಳಿ: ದೂರು ನೀಡಿದವರ ವಿರುದ್ಧವೇ ಸುಳ್ಳು ದೂರು | ಎಸ್ ಡಿಪಿಐ ಆಕ್ರೋಶ - Mahanayaka

ಕಡಬ ಚರ್ಚ್ ದಾಳಿ: ದೂರು ನೀಡಿದವರ ವಿರುದ್ಧವೇ ಸುಳ್ಳು ದೂರು | ಎಸ್ ಡಿಪಿಐ ಆಕ್ರೋಶ

sdpi
08/05/2022

ಮಂಗಳೂರು: ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ಪೇರಡ್ಕದಲ್ಲಿ ಇಮ್ಯಾನ್ಯುಯೆಲ್ ಚರ್ಚಿನ ಮೇಲೆ  ಇತ್ತೀಚೆಗೆ ಅಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಜರಂಗದಳದ ಕಿಡಿಗೇಡಿಗಳು  ದಾಳಿ ನಡೆಸಿ, ಅಲ್ಲಿನ ಹೋಲಿ ಕ್ರಾಸನ್ನು ಧ್ವಂಸ ಮಾಡಿ, ಅಲ್ಲಿ ಕೇಸರಿಧ್ವಜವನ್ನ ಕಟ್ಟಿದ್ದಾರೆ. ಇದರ ವಿರುದ್ಧ ಜಿಲ್ಲಾದ್ಯಂತ ಸುದ್ದಿಯಾಗಿ  ಸಾರ್ವಜನಿಕವಾಗಿ,  ಖಂಡನೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕಾದ ಘಟನೆ ಆಗಿದ್ದರೂ ಪೊಲೀಸರು ದೂರು ದಾಖಲಿಸಿರಲಿಲ್ಲ.

ದಾಳಿಯಿಂದ ಭಯ ಹಾಗೂ ಆತಂಕಕ್ಕೊಳಗಾಗಿದ್ದ ಚರ್ಚಿನ ದರ್ಮ ಗುರುಗಳು ಮತ್ತು ಚರ್ಚಿನ ಅನುಯಾಯಿಗಳು ದೂರು ನೀಡಿರಲಿಲ್ಲ. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ SDPI ದಕ್ಷಿಣ ಕನ್ನಡ ಜಿಲ್ಲಾ ಉಪಾದ್ಯಕ್ಷರಾದ ವಿಕ್ಟರ್ ಮಾರ್ಟೀಸ್ ರವರ ನೇತೃತ್ವದ ನಿಯೋಗವು ಚರ್ಚಿನ ಧರ್ಮ ಗುರುಗಳು ಹಾಗೂ ಅಲ್ಲಿನ ಪ್ರತಿನಿಧಿಗಳೊಂದಿಗೆ ಮಾತನಾಡಿ, ಅವರಿಗೆ ಧೈರ್ಯ ತುಂಬಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಎಸ್ ಡಿಪಿಐ ತಿಳಿಸಿದೆ.

ಮೊದಲು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದ ಪೊಲೀಸರು ಕೊನೆಗೆ  ದೂರು ಸ್ವೀಕರಿಸಿದರು. ದೂರು ಕೊಟ್ಟು ಎರಡು ದಿನಗಳಾದರೂ ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಹಚ್ಚಬೇಕಾದ ಪೊಲೀಸರು ಇಂದು ಯಾವನೋ ಒಬ್ಬ ಸಂಘ ಪರಿವಾರಕ್ಕೆ ಸೇರಿದ ವ್ಯಕ್ತಿ, ಚರ್ಚಿನ ಧರ್ಮ ಗುರುಗಳ ಮೇಲೆ ಮತ್ತು  SDPI ಮುಖಂಡರ ಮೇಲೆ  ಕೊಟ್ಟ ಆಧಾರ ರಹಿತವಾದ ಸುಳ್ಳು ದೂರನ್ನ ಸ್ವೀಕರಿಸಿ FIR ದಾಖಲಿಸುವ ಮೂಲಕ ಸಂತ್ರಸ್ತರು ಮತ್ತು ಹೋರಾಟಗಾರರ ಮೇಲೆ ಅನ್ಯಾಯ ಎಸಗಿದ್ದಾರೆ ಎಂದು ಎಸ್ ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ.

ಪೊಲೀಸರಿಗೆ ನೈಜ ಘಟನೆ ಬಗ್ಗೆ ಗೊತ್ತಿದ್ದರೂ, ಯಾರ ಒತ್ತಡಕ್ಕೆ ಮಣಿದು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

ಕಿಡಿಗೇಡಿಗಳಿಂದ  ಸಮಾಜ ವಿರೋಧಿ ಕೃತ್ಯಗಳು ನಡೆದಾಗ ಅದರ ವಿರುದ್ಧ ಪೊಲೀಸರು ದೂರು ದಾಖಲಿಸದಿದ್ದಾಗ ಸಂತ್ರಸ್ತರು ದೂರು  ನೀಡಿದರೆ ಅದು ಅಪರಾಧವೇ ? .  ಇದೇ ರೀತಿ ಮುಂದುವರೆದರೆ ನಾಡಿನ ಕಾನೂನು ಸುವ್ಯವಸ್ಥೆ ಏನಾಗಬಹುದು?  ಉತ್ತರ ಪ್ರದೇಶದ ಮಾದರಿಯಲ್ಲಿ ಇಂದು ಬುದ್ದಿವಂತರ , ವಿದ್ಯಾವಂತರ ಜಿಲ್ಲೆಯೆಂಬ ಹೆಸರು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಳು ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರ ಮತ್ತು ಕ್ರೈಸ್ತರ ಮೇಲೆ ಅವರ ಆರಾಧನಾಲಯಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆಸುತ್ತಿದ್ದಾರೆ. ಇವರ ವಿರುದ್ಧ ಯಾಕೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.  ಅದೂ ಕೂಡ ದಲಿತ ಸಮುದಾಯದಿಂದ ಆಯ್ಕೆಯಾದ  ಜಿಲ್ಲೆಯ ಏಕೈಕ ಸಂಪುಟ ಸಚಿವರಾದ ಅಂಗಾರರವರ ಸ್ವ ಕ್ಷೇತ್ರದಲ್ಲಿ ಇತ್ತೀಚೆಗೆ ನೆಲ್ಯಾಡಿ ಯಲ್ಲಿ ಬಜರಂಗದಳದ ಗೂಂಡಾಗಳು ಕ್ರೈಸ್ತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬೆನ್ನಿಗೇ ಕಡಬದಲ್ಲಿ ಕ್ರೈಸ್ತರ ಚರ್ಚಿಗೆ ದಾಳಿ ಮಾಡಲಾಗಿದೆ.  ಈ ಎರಡೂ ಕಡೆಗಳಲ್ಲಿ ಆರೋಪಿಗಳ ಬಂಧನ ಇನ್ನೂ ನಡೆದಿಲ್ಲ. ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಇರುವ ಉನ್ನತ ಪೊಲೀಸ್ ಅಧಿಕಾರಿಗಳು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಪೊಲೀಸ್ ಇಲಾಖೆ ಸಂತ್ರಸ್ತರ ಮತ್ತು ಹೋರಾಟಗಾರರ ಮೇಲೆ ಹೂಡಿದ ಸುಳ್ಳು ಮೊಕದ್ದಮೆ ಕೂಡಲೇ ಹಿಂಪಡೆಯಬೇಕು. ಮತ್ತು ಚರ್ಚ್ ದಾಳಿಯ ಆರೋಪಿಗಳನ್ನ ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಇದರ ವಿರುದ್ಧ SDPI ಜನಾಂದೋಲನದ ಜೊತೆಗೆ ಇದನ್ನು  ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ ಎಂದು ಅನ್ವರ್ ಸಾದತ್ ಬಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ʼ ಅಮ್ಮʼ ಎಂದರೆ ಆತ್ಮಸ್ಥೈರ್ಯದ ಸಂಕೇತ | ಬದುಕಿನ ಪುಟಗಳನ್ನು ತೆರೆದುನೋಡಿದಾಗ

ಯೂಟ್ಯೂಬರ್  ರಿಫಾ ಮೆಹ್ನು ಅನುಮಾನಾಸ್ಪದ ಸಾವಿಗೆ ಹೊಸ ಟ್ವಿಸ್ಟ್: ಸಮಾಧಿಯಿಂದ ಮೃತದೇಹ ಹೊರ ತೆಗೆದ ಪೊಲೀಸರು

2 ವರ್ಷದ ಮಗನ ಮುಂದೆಯೇ ಮಹಿಳೆಯ ಮೇಲೆ 79 ದಿನಗಳ ಕಾಲ ಮಂತ್ರವಾದಿಯಿಂದ ಅತ್ಯಾಚಾರ!

ಉಡುಪಿ: ಕಾಂಗ್ರೆಸ್ ತೊರೆದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ತೀವ್ರ ಸ್ವರೂಪ ಪಡೆದುಕೊಂಡ ಪ್ರಜೆಗಳ ಹೋರಾಟ: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ