ಕಂಗನಾ ರಾವತ್ ಗೆ ಶಾಕ್: ಬಾಂಗ್ಲಾದಲ್ಲಿ 'ಎಮರ್ಜೆನ್ಸಿ'ಗೆ ಬ್ರೇಕ್! - Mahanayaka
12:19 PM Saturday 12 - September 2026

ಕಂಗನಾ ರಾವತ್ ಗೆ ಶಾಕ್: ಬಾಂಗ್ಲಾದಲ್ಲಿ ‘ಎಮರ್ಜೆನ್ಸಿ’ಗೆ ಬ್ರೇಕ್!

15/01/2025

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನ ಚರಿತ್ರೆಯನ್ನು ಆಧರಿಸಿದ ಕಂಗನಾ ರಾವತ್ ರ ‘ಎಮರ್ಜೆನ್ಸಿ’ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಬಾಂಗ್ಲಾದೇಶದಲ್ಲಿ ಈ ಚಿತ್ರವನ್ನು ನಿಷೇಧಿಸಲಾಗಿದೆ. ಎರಡೂ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಚಿತ್ರಕ್ಕೆ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ.

ಚಿತ್ರದ ವಿಷಯಕ್ಕಿಂತ ಹೆಚ್ಚಾಗಿ ಭಾರತ-ಬಾಂಗ್ಲಾದೇಶ ಸಂಬಂಧಗಳಲ್ಲಿ ಹದಗೆಟ್ಟ ಕಾರಣದಿಂದ ಚಿತ್ರವನ್ನು ನಿಷೇಧಿಸಲಾಗಿದೆ.
ಚಿತ್ರದಲ್ಲಿ ಕಂಗನಾ ರಣಾವತ್, ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮತ್ತು ದಿವಂಗತ ಸತೀಶ್ ಕೌಶಿಕ್ ನಟಿಸಿದ್ದಾರೆ.

ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅವಶ್ಯಕತೆಗಳನ್ನು ಪೂರೈಸದ ಕಾರಣ ಮುಂದೂಡಲಾಗಿತ್ತು. ನಂತರ 13 ಬದಲಾವಣೆಗಳೊಂದಿಗೆ U/A ಪ್ರಮಾಣೀಕರಣವನ್ನು ಪಡೆದಿದ್ದು, ಈ ಚಿತ್ರವು ಜನವರಿ 17ರಂದು ಬಿಡುಗಡೆಯಾಗಲಿದೆ. ಚಿತ್ರ ನಿರ್ಮಿಸಿ ತಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಿ ಈಗಾಗಲೇ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler