ಕಾನ್ಶಿ ಫೌಂಡೇಶನ್ ಬಗ್ಗೆ ವಿಜಯ ಮಹೇಶ್ ಅಪಾರವಾದ ಕನಸನ್ನು ಹೊಂದಿದ್ದರು | ಯೋಗೇಶ್ ಮಾಸ್ಟರ್ - Mahanayaka

ಕಾನ್ಶಿ ಫೌಂಡೇಶನ್ ಬಗ್ಗೆ ವಿಜಯ ಮಹೇಶ್ ಅಪಾರವಾದ ಕನಸನ್ನು ಹೊಂದಿದ್ದರು | ಯೋಗೇಶ್ ಮಾಸ್ಟರ್

vijaya mahesh yogesh rajamarga
06/09/2021

ಬೆಂಗಳೂರು: ವಿಜಯ ಮಹೇಶ್ ಅವರು ತಮ್ಮ ನಿವೃತ್ತ ಜೀವನದಲ್ಲಿ ಕಾನ್ಶಿ ಫೌಂಡೇಶನ್ ಬಗ್ಗೆ ಅಪಾರವಾದ ಕನಸನ್ನು ಹೊಂದಿದ್ದರು ಎಂದು ಖ್ಯಾತ ಸಾಹಿತಿ ಯೋಗೇಶ್ ಮಾಸ್ಟರ್ ಅವರು ಹೇಳಿದ್ದು, ವಿಜಯ ಮಹೇಶ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಶಾಸಕ ಎನ್.ಮಹೇಶ್ ಅವರ ಧರ್ಮಪತ್ನಿ, ಬರಹಗಾರ್ತಿ, ಚಳುವಳಿಗಾರ್ತಿ ವಿಜಯ ಮಹೇಶ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ ಮಾಸ್ಟರ್, ವಿಜಯಾ ಮಹೇಶ್ ಅತ್ಯುತ್ತಮ ಓದುಗರು ಮತ್ತು ಲೇಖಕಿ. ಅಪಾರ ವಿಷಯಗಳನ್ನು ಹಂಚಿಕೊಳ್ಳುವಲ್ಲಿ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಯಾಗಿದ್ದರು. ತಮ್ಮ ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿ ಕಾನ್ಶಿ ಫೌಂಡೇಶನನ್ನು ಅಪಾರವಾಗಿ ಕನಸಿದ್ದರು ವಿಜಯಾ ಮಹೇಶ್. ಕಳೆದ ಬಾರಿ ಸಿಕ್ಕಿದಾಗ ಅವರ ಕನಸು ಕನವರಿಕೆಗಳಿಗೆ ಇದೇ ಜಾಗದಲ್ಲಿ ಕಿವಿಯಾಗಿದ್ದೆ. ಇವತ್ತು ಅಲ್ಲೇ ಅವರ ಅಂತಿಮ ದರ್ಶನ ಮತ್ತು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದಾರೆ.

ಅವರು ನಡೆಯಬೇಕೆಂದು ಎದುರು ನೋಡುತ್ತಿದ್ದ ಸಮಾಜೋ ಸಾಂಸ್ಕೃತಿಕ ಚಟುವಟಿಕೆಗಳನ್ನು ಜೀವಂತವಾಗಿ ಇರಿಸಿಕೊಳ್ಳುವ ಮೂಲಕ ಅವರ ಆಶಯವನ್ನು ಸಜೀವವಾಗಿ ಮುಂದೂ ಕಾಣಬಹುದಾಗಿದೆ.  ಕನಕಪುರ ರಸ್ತೆಯಲ್ಲಿ ರವಿಶಂಕರ್ ಆಶ್ರಮದ ಎದುರಲ್ಲಿ ಮಧ್ಯಾಹ್ನ ಇಂದು ಮೂರುಗಂಟೆಯ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ. ವಿಜಯಾ ಮಹೇಶ್ ಅವರಿಗೆ ವಿದಾಯದ ವಂದನೆಗಳು ಎಂದು ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.

ಭಾರತದ ಮೂಲನಿವಾಸಿಗಳು ಮತ್ತು ಅಸುರರ ಬಗ್ಗೆ ನಾವಿಬ್ಬರೂ ಅದೆಷ್ಟು ಮಾತಾಡಿದ್ದೇವೆಯೋ ಲೆಕ್ಕವಿಲ್ಲ. ನನ್ನ ಬರವಣಿಗೆಗೆ ಪೂರಕವಾದ ಅದೆಷ್ಟೋ ಪುಸ್ತಕಗಳನ್ನು ಮತ್ತು ಆಕರಗಳನ್ನು ಒದಗಿಸಿದ್ದರು.  ನನ್ನ ಮೇಲೆ ದಾಳಿಗಳಾದಾಗ ಖಂಡಿಸುತ್ತಿದ್ದೇ ಅಲ್ಲದೆ, ವೈಯಕ್ತಿಕವಾಗಿ ಧೈರ್ಯ ತುಂಬುತ್ತಿದ್ದರು.  ಇತ್ತೀಚೆಗೆ ಅವರೇ ಏರ್ಪಡಿಸಿದ್ದ ಡಾ ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಕ್ಕಾಗಲೂ ಅದೇ ಪ್ರೀತಿ, ಅದೇ ಸ್ನೇಹ ಮತ್ತು ಮಮತೆ ತೋರಿಸಿದ್ದರು. ಅವರು ಇಷ್ಟು ಬೇಗ ಮರಣಿಸಿದ್ದು ನಂಬಲಾಗದ ಮತ್ತು ಅರಗಿಸಿಕೊಳ್ಳಲಾಗದ ಸಂಗತಿ. ಅವರ ಅಕಾಲಿಕ ಅಗಲಿಕೆ ನಿಜಕ್ಕೂ ಸಂಕಟದ ವಿಷಯ.  ನನ್ನ ಭಾವಪೂರ್ಣ ಶ್ರದ್ಧಾಂಜಲಿ ಅವರಿಗೆ.  ವಿಜಯಮ್ಮನವರಿಗೆ ವಿದಾಯದ ವಂದನೆಗಳು ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ

ಪೊಲೀಸರ ಎದುರೇ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರಿಗೆ ಹಲ್ಲೆ ನಡೆಸಿದ ಬಲಪಂಥೀಯರು!

ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇವೆ | ರೈತ ನಾಯಕರಿಂದ ಎಚ್ಚರಿಕೆ

ನನ್ನ ವಿರುದ್ಧದ ಆರೋಪ ಸಾಬೀತಾದರೆ, ಸಾರ್ವಜನಿಕವಾಗಿ ನೇಣಿಗೇರುತ್ತೇನೆ | ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿಕೆ

ತಾಲಿಬಾನಿಗಳ ವಿರುದ್ಧ ಸಿಡಿದೆದ್ದ ಅಮ್ರುಲ್ಲಾ ಸಾಲೇಹ್ ಯಾರು? | ಜೈಲಿನಲ್ಲಿ ತಾಲಿಬಾನಿಗರ ದಂಗೆಯನ್ನು ಇವರು ಎದುರಿಸಿದ್ದು ಹೇಗೆ?

ಗಣೇಶೋತ್ಸವಕ್ಕೆ ಷರತ್ತು ಬದ್ಧ ಅವಕಾಶ | ಸಂಘಟಕರು ಈ ನಿಯಮಗಳನ್ನು ಪಾಲಿಸಲೇ ಬೇಕು!

ಇತ್ತೀಚಿನ ಸುದ್ದಿ