ನಟ ಕಪಿಲ್ ಶರ್ಮಾ, ರಾಜ್ಪಾಲ್ ಯಾದವ್ ಸೇರಿ ಇಬ್ಬರಿಗೆ ಬೆದರಿಕೆ ಇ-ಮೇಲ್: ತನಿಖೆ ಚುರುಕು

ಹಾಸ್ಯನಟ-ನಟ ಕಪಿಲ್ ಶರ್ಮಾ, ನಟ ರಾಜ್ಪಾಲ್ ಯಾದವ್, ನೃತ್ಯ ಸಂಯೋಜಕ-ನಿರ್ದೇಶಕ ರೆಮೋ ಡಿಸೋಜಾ ಮತ್ತು ಗಾಯಕ-ಹಾಸ್ಯನಟ ಸುಗಂಧಾ ಮಿಶ್ರಾ ಅವರಿಗೆ ಬುಧವಾರ ಬೆದರಿಕೆ ಇಮೇಲ್ ಗಳು ಬಂದಿವೆ.
“ನಿಮ್ಮ ಇತ್ತೀಚಿನ ಚಟುವಟಿಕೆಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಅಲ್ಲದೇ ನಾವು ಸೂಕ್ಷ್ಮ ವಿಷಯವನ್ನು ನಿಮ್ಮ ಗಮನಕ್ಕೆ ತರುವುದು ಕಡ್ಡಾಯ ಎಂದು ನಾವು ನಂಬುತ್ತೇವೆ. ಇದು ಪ್ರಚಾರದ ಸ್ಟಂಟ್ ಅಥವಾ ನಿಮಗೆ ಕಿರುಕುಳ ನೀಡುವ ಪ್ರಯತ್ನವಲ್ಲ” ಎಂದು ಇಮೇಲ್ ನಲ್ಲಿ ತಿಳಿಸಲಾಗಿದೆ.
ಅಲ್ಲದೇ “ಈ ಸಂದೇಶವನ್ನು ಅತ್ಯಂತ ಗಂಭೀರ ಮತ್ತು ಗೌಪ್ಯತೆಯಿಂದ ಪರಿಗಣಿಸಬೇಕು” ಎಂದು ಎಚ್ಚರಿಸಲಾಗಿದೆ.
ಹಾಗೇ ಮಾಡಲು ವಿಫಲವಾದರೆ ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುವ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ಮೇಲ್ ನಲ್ಲಿ ಹೇಳಲಾಗಿದೆ.
ಮುಂದಿನ ಎಂಟು ಗಂಟೆಗಳಲ್ಲಿ ಅವರು ಅದಕ್ಕೆ ಪ್ರತಿಕ್ರಿಯಿಸದಿದ್ದರೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬಿಷ್ಣು ಎಂಬವರು ಸಹಿ ಮಾಡಿದ ಇಮೇಲ್ ನಲ್ಲಿ ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj