ಕೈಯಲ್ಲಿ ಗಣಪತಿ, ಕಾಲಲ್ಲಿ ಚಪ್ಪಲಿ: ಗಣೇಶ ಅಂದ್ರೆ ಬಿಜೆಪಿ ನಾಯಕರಿಗೆ ಇಷ್ಟೆನಾ!? - Mahanayaka

ಕೈಯಲ್ಲಿ ಗಣಪತಿ, ಕಾಲಲ್ಲಿ ಚಪ್ಪಲಿ: ಗಣೇಶ ಅಂದ್ರೆ ಬಿಜೆಪಿ ನಾಯಕರಿಗೆ ಇಷ್ಟೆನಾ!?

r ashok
15/09/2026

ಬೆಂಗಳೂರು: ಗಣೇಶೋತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕೈಗೆತ್ತಿಕೊಳ್ಳಂತೆ ಖಡಕ್ ವಾರ್ನಿಂಗ್ ನೀಡಿದ್ದ ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಹಮ್ಮಿಕೊಂಡಿದ್ದ ಪ್ರತಿಭಟನೆ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ.

ಗಣಪತಿ ಹಬ್ಬ ಆಚರಣೆಗೆ ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಅಡ್ಡಿಪಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ಮಾಡಿತ್ತು. ಪ್ರತಿಭಟನೆ ವೇಳೆ ಗಣಪತಿಯ ಮೂರ್ತಿಯನ್ನು ಹಿಡಿದುಕೊಂಡು ಬಿಜೆಪಿ ನಾಯಕರು ಘೋಷಣೆ ಕೂಗಿದ್ದರು. ಆದ್ರೆ, ಕಾಲಲ್ಲಿ ಚಪ್ಪಲಿ ಧರಿಸಿ ಪ್ರತಿಭಟನೆ ನಡೆಸಿರುವ ಬಿಜೆಪಿ ನಾಯಕರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಶೂ ಹಾಕಿರುವ ಬಿಜೆಪಿ ನಾಯಕರು ಒಂದೇ ಕೈಯಲ್ಲಿ ಯಾವುದೋ ಆಟಿಕೆಯಂತೆ ಗಣಪತಿಯ ಮೂರ್ತಿಯನ್ನು ನಿರ್ಲಕ್ಷ್ಯತನದಿಂದ ಹಿಡಿದುಕೊಂಡಿರುವುದಲ್ಲದೇ, ಚಪ್ಪಲಿ ಧರಿಸಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಆರ್.ಅಶೋಕ್, ಮಾಜಿ ಸಂಸದ ಪ್ರತಾಪ್ ಸಿಂಹ, ಶ್ರೀವತ್ಸ, ಸಚ್ಚಿದಾನಂದ ಸೇರಿ ಹಲವು ಬಿಜೆಪಿ  ನಾಯಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಧರ್ಮವನ್ನು ಲೀಸ್ ಗೆ ಪಡೆದುಕೊಂಡವರಂತೆ ಮಾತನಾಡುವ ಬಿಜೆಪಿ ನಾಯಕರು ಸ್ವತಃ ಹಿಂದೂ ದೇವರ ಬಗ್ಗೆ ಇಷ್ಟೊಂದು ಕೇವಲ ಮನೋಭಾವನೆ ಹೊಂದಿದ್ದಾರೆಯೇ? ಇವರಿಗೆ ದೇವರು ಧರ್ಮ ಕೇವಲ ರಾಜಕೀಯ ಬಂಡವಾಳ ಮಾತ್ರವೇ ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ಜನರು ಗಣಪತಿಯ ಪ್ರಸಾದ ಪಡೆಯಬೇಕಾದರೆ ಕೂಡ ಸ್ನಾನ ವೃತಗಳನ್ನು ಆಚರಿಸಿ, ಪರಿಶುದ್ಧವಾಗಿ ತೆರಳುತ್ತಾರೆ. ಆದರೆ ಹಿಂದೂ ಧರ್ಮದ ಬಗ್ಗೆ ದೇವರ ಪಾವಿತ್ರ್ಯತೆ ಬಗ್ಗೆ ಭಾಷಣ ಹೊಡೆಯುತ್ತಿರುವ ಬಿಜೆಪಿ ನಾಯಕರಿಗೆ ದೇವರ ಮೂರ್ತಿ ಕೈಯಲ್ಲಿ ಹಿಡಿದುಕೊಳ್ಳುವಾಗ ಚಪ್ಪಲಿ ಧರಿಸುವುದೇ ಮುಖ್ಯವಾಯ್ತೆ? ಚಪ್ಪಲಿ ಧರಿಸದೇ ಇರಲು ಸಾಧ್ಯವಿಲ್ಲವಾದರೆ, ದೇವರ ವಿಗ್ರಹ ಕೈಯಲ್ಲಿ ಹಿಡಿದು ಬಿಟ್ಟಿ ಶೋ ಕೊಡುವ ಅಗತ್ಯವಾದರೂ ಇತ್ತೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Suspected Malware | Cloudflare

Warning

Suspected Malware

This website has been reported for potentially distributing malware.

Malware is malicious software created to intentionally disrupt the normal operations of a device.

Learn More