ಪಬ್ ನಲ್ಲಿ ಕಿರಿಕ್: ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿಗೆ ಬಿಯರ್ ಬಾಟಲಿಯಿಂದ ಹಲ್ಲೆ - Mahanayaka
6:08 AM Tuesday 10 - November 2026

ಪಬ್ ನಲ್ಲಿ ಕಿರಿಕ್: ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿಗೆ ಬಿಯರ್ ಬಾಟಲಿಯಿಂದ ಹಲ್ಲೆ

kirik keerthi
03/12/2021

ಬೆಂಗಳೂರು: ಪಬ್ ನಲ್ಲಿ ನಡೆದ ಕಿರಿಕ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಅವರಿಗೆ ಅಭಿಮಾನಿಯೋರ್ವ ಬಿಯರ್ ಬಾಟಲಿಯಲ್ಲಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದ್ದು, ಬೆಂಗಳೂರಿನ ಸದಾಶಿವನಗರದ ಪಬ್ ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವರದಿಗಳ ಪ್ರಕಾರ, ಗುರುವಾರ ಕಿರಿಕ್ ಕೀರ್ತಿ ತಮ್ಮ ಸ್ನೇಹಿತರ ಜೊತೆಗೆ ಪಬ್ ಗೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಕಿರಿಕ್ ಕೀರ್ತಿ ಅವರ ಅನುಮತಿ ಇಲ್ಲದೇ ಫೋಟೋ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕ್ ಕೀರ್ತಿ ಆ ವ್ಯಕ್ತಿಯನ್ನು ತರಾಟೆಗೆತ್ತಿಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ವ್ಯಕ್ತಿ ಕ್ಷಮೆ ಕೇಳಿದರೂ, ಬಿಡದೇ ಕಿರಿಕ್ ಕೀರ್ತಿ ವ್ಯಕ್ತಿಯ ಮೇಲೆ ಹರಿಹಾಯ್ದಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ಬಿಯರ್ ಬಾಟಲಿಯಿಂದ ಕಿರಿಕ್ ಕೀರ್ತಿಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಕಿರಿಕ್ ಕೀರ್ತಿ, “ನಾನು ಕುಳಿತಿದ್ದ ಟೇಬಲ್ ಹತ್ರ ವ್ಯಕ್ತಿಯೋರ್ವ, ಬಾ ನಿನ್ನ ಜೊತೆಗೆ ಮಾತನಾಡಬೇಕು ಎಂದು ಕರೆದ. ಅವನಿಗೆ ಕುಡಿದು ನಿಂತುಕೊಳ್ಳಲು ಕೂಡ ಸಾಧ್ಯವಾಗ್ತಿರಲಿಲ್ಲ. ನಾನು ಯಾರು ಅಂತ ಗೊತ್ತಾ ಎಂದು ಕೇಳಿದ, ಆಗ ನಾನು ಗೊತ್ತಿಲ್ಲ ಅಂತ ಹೇಳಿದೆ. ನೀನು ಯಾರು ಅಂತ ಗೊತ್ತಲೈ ಎಂದು ಬ್ಯಾಡ್ ವರ್ಡ್ ಯೂಸ್ ಮಾಡಿದ. ಈ ರೀತಿ ಮಾಡ್ಬೇಡ, ನಿನ್ಗೆ ನಿಂತು ಕೊಳ್ಳಲು ಕೂಡ ಆಗ್ತಿಲ್ಲ, ಫಸ್ಟ್ ಮನೆಗೆ ಹೋಗು ಎಂದು ಹೇಳಿದೆ. ಅವನ ಫ್ರೆಂಡ್ ಇನ್ನೊಬ್ಬ ಇದನ್ನು ವಿಡಿಯೋ ಮಾಡ್ತಿದ್ದ. ಅದಕ್ಕೆ ನಾನು  ವಿರೋಧ ಮಾಡಿ, ಯಾಕೆ ವಿಡಿಯೋ ಮಾಡ್ತಿದ್ದಿ ಎಂದು ಫೋನ್ ಕಿತ್ತುಕೊಳ್ಳಲು ನೋಡಿದೆ. ಆ ವೇಳೆ 3 ಬಿಯರ್ ಬಾಟಲಿಯಲ್ಲಿ ನನ್ನ ತಲೆಗೆ ಎಲ್ಲ ಹೊಡೆದಿದ್ದಾರೆ. ಯಾಕೆ ಹೊಡೆದರು ಅಂತ ಮ್ಯಾಟ್ರೇ ಇಲ್ಲ… ಎಂದು ಕಿರಿಕ್ ಕೀರ್ತಿ ವಿವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಮಿಕ್ರಾನ್ ಡೆಲ್ಟಾಕ್ಕಿಂತ ಅಪಾಯಕಾರಿ ಅಲ್ಲ: ಈ ವೈರಸ್ ನ್ನು ಕಂಡು ಹಿಡಿದ ಡಾಕ್ಟರ್ ಆ್ಯಂಜಲಿಕ್ ಹೇಳಿದ್ದೇನು?

ಶಾಕಿಂಗ್ ನ್ಯೂಸ್: ಕರ್ನಾಟಕದಲ್ಲಿ 2 ಒಮಿಕ್ರಾನ್ ಪ್ರಕರಣಗಳು ಪತ್ತೆ

ಪುತ್ರನ ಮದುವೆಯ ಸಂಭ್ರಮದಲ್ಲಿದ್ದ ದಂಪತಿ ರಸ್ತೆ ಅಪಘಾತದಲ್ಲಿ ದಾರುಣ ಸಾವು!

ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಚಿಂತಾಜನಕ

ಭೀಕರ ಅಪಘಾತ: ಇಬ್ಬರು ಬಜರಂಗದಳದ ಮುಖಂಡರ ದಾರುಣ ಸಾವು

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler