ಪಿಜ್ಜಾದಲ್ಲಿ ಪತ್ತೆಯಾಯ್ತು ಚಾಕುವಿನ ತುಂಡು: ಸ್ವಲ್ಪ ಯಾಮಾರಿದ್ದರೂ ಹೋಗ್ತಿತ್ತು ಗ್ರಾಹಕನ ಜೀವ
ಪ್ರತಿಯೊಬ್ಬರಿಗೂ ಮನೆಯಲ್ಲಿ ಮಾಡುವ ಊಟಕ್ಕಿಂತಲೂ ಹೊರಗಿನ ಫುಡ್ ತುಂಬಾನೆ ವಿಶೇಷ. ವಾರದಲ್ಲಿ ಒಮ್ಮೆಯಾದರೂ ಹೊರಗಿನ ಫುಡ್ ತಿನ್ನಬೇಕು, ಇಲ್ಲವಾದರೆ ಜೀವನದಲ್ಲಿ ಏನು ಸ್ಪೆಷಲ್ ಇದೆ ಅಂತ ಕೇಳುವವರೆ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಹೊರಗಿನ ಆಹಾರಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆಗಳೂ ಕೇಳಿ ಬಂದಿವೆ. ಹೊರಗಿನ ಫುಡ್ ಗಳಲ್ಲಿ ಕೀಟಗಳು, ಮಾನವನ ಬೆರಳು, ಹಲ್ಲಿಗಳು ಹೀಗೆ ಹಲವು ಸುದ್ದಿಗಳು ದಿನನಿತ್ಯದ ಜೀವನಗಳಲ್ಲಿ ನೋಡಲು ಸಿಗುತ್ತಿವೆ. ಇದೀಗ ಮತ್ತೊಂದು ಇಂತಹದ್ದೇ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಸ್ವಲ್ಪ ಯಾಮಾರಿದ್ದರೂ ಗ್ರಾಹಕರ ಪ್ರಾಣವೇ ಹೋಗುತ್ತಿತ್ತು.
ರಾತ್ರಿ ವೇಳೆ ಪಿಜ್ಜಾ(Pizza) ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರು, ಬಿಸಿ ಬಿಸಿ ಪಿಜ್ಜಾ ಸೇವಿಸುತ್ತಿದ್ದ ವೇಳೆ ಹರಿತವಾದ ಚಾಕುವಿನ ತುಂಡೊಂದು ಪಿಜ್ಜಾದ ತುಂಡಿನಲ್ಲಿ ಸಿಕ್ಕಿದ್ದು, ಸ್ವಲ್ಪ ಯಾಮಾರಿದ್ದರೂ ಗ್ರಾಹಕನ ಪ್ರಾಣಕ್ಕೆ ಅಪಾಯ ಸಂಭವಿಸುತ್ತಿತ್ತು.
ಡಾಮಿನೋಸ್ ಗೆ 596 ರೂಪಾಯಿ ನೀಡಿ ಅರುಣ್ ಕಾಪ್ಸೆ ಎಂಬವರು ಪಿಜ್ಜಾ ಆರ್ಡರ್ ಮಾಡಿದ್ದರು. ಸ್ಪೈನ್ ರೋಡ್ ನ ಜೈಗಣೇಶ್ ಎಂಪೈರ್ ನಲ್ಲಿರುವ ಡಾಮಿನೋಸ್ ಔಟ್ ಲೆಟ್ ನಿಂದ ಪಿಜ್ಜಾ ಡೆಲಿವರಿ ಮಾಡಲಾಗಿತ್ತು. ಪಿಜ್ಜಾವನ್ನು ತಿನ್ನುತ್ತಿದ್ದ ವೇಳೆ ಅರುಣ್ ಕಾಪ್ಸೆ ಅವರಿಗೆ ಬಾಯಿಯಲ್ಲಿ ಏನೋ ಮುಳ್ಳಿನಂತೆ ಸಿಕ್ಕಿದೆ. ಬಾಯಿಯಿಂದ ಪಿಜ್ಜಾ ತುಂಡು ಹೊರತೆಗೆದು ನೋಡಿದ ವೇಳೆ ಚಾಕುವಿನ ತುಂಡು ಪತ್ತೆಯಾಗಿದೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಅರುಣ್, ನಾನು ಪಿಜ್ಜಾವನ್ನು ಸೇವನೆ ಮಾಡಿದ್ದರೆ, ಗಂಭೀರವಾಗಿ ಗಾಯಗೊಳ್ಳುತ್ತಿದ್ದೆ, ಇಲ್ಲವಾದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದಿದ್ದಾರೆ.
ಇನ್ನೂ ಪಿಜ್ಜಾದಲ್ಲಿ ಚಾಕುಪೀಸ್ ಪತ್ತೆಯಾಗಿರುವ ವಿಚಾರವನ್ನು ಡಾಮಿನೋಸ್ ಮ್ಯಾನೇಜರ್ ಗೆ ಕರೆ ಮಾಡಿ ತಿಳಿಸಿದ ವೇಳೆ ಆರಂಭದಲ್ಲಿ ಮ್ಯಾನೇಜರ್ ಅಲ್ಲಗಳೆದಿದ್ದು, ಬಳಿಕ ಪಿಜ್ಜಾದಲ್ಲಿ ಚಾಕು ಪೀಸ್ ಇರುವುದನ್ನು ಫೋಟೋ ತೆಗೆದು ಕಳುಹಿಸಿದ ವೇಳೆ ಆತ, ಅರುಣ್ ಮನೆಗೆ ಓಡಿ ಬಂದು, ತಪ್ಪು ಒಪ್ಪಿಕೊಂಡಿದ್ದು, ಕ್ಷಮೆಯಾಚಿಸಿ, ನೀವು ಪಿಜ್ಜಾದ ಹಣವನ್ನು ನೀಡುವುದು ಬೇಡ, ದಯವಿಟ್ಟು ಈ ವಿಷಯ ದೊಡ್ಡದು ಮಾಡಬೇಡಿ ಎಂದು ಕೈಕಾಲು ಹಿಡಿದಿದ್ದಾನೆ. ಮೀಡಿಯಾಗಳಿಗೆ ಮಾಹಿತಿ ನೀಡದಂತೆ ಮನವಿ ಮಾಡಿದ್ದಾನಂತೆ.
ಒಟ್ಟಿನಲ್ಲಿ ನಮ್ಮ ಎಷ್ಟೇ ದೊಡ್ಡ ಆಹಾರ ಸರಬರಾಜು ಕಂಪೆನಿಯೇ ಫುಡ್ ಡೆಲಿವರಿ ಮಾಡಲಿ, ಆಸ್ವಾದಿಸಿ ತಿನ್ನುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ, ಸಾಧ್ಯವಾದಷ್ಟು ಆಹಾರಗಳನ್ನು ಬಿಡಿಸಿ, ಪರೀಕ್ಷಿಸಿ ತಿನ್ನುವುದು ಉತ್ತಮ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: