OYO Rules: ಮದುವೆಯಾಗದ ಜೋಡಿಗೆ ಹೊಸ ನಿಯಮ ಜಾರಿ ಮಾಡಿದ ಓಯೋ!
ನವದೆಹಲಿ: ಭಾರತದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪೆನಿ ಓಯೋ(OYO) ಹೊಸ ನಿಯಮವೊಂದನ್ನು ಜಾರಿ ಮಾಡಿದೆ. ಮದುವೆಯಾಗದ ಜೋಡಿಗೆ ಓಯೋ ರೂಂ ನೀಡುವುದಿಲ್ಲ ಎಂದು ಘೋಷಿಸಿದೆ. ಈ ನಿಯಮವನ್ನು ಈಗಾಗಲೇ ಮೀರತ್ ನಿಂದ ಆರಂಭಿಸಲಾಗಿದೆ. ಮುಂದೆ ದೇಶದೆಲ್ಲೆಡೆಗಳಲ್ಲೂ ಜಾರಿಗೊಳಿಸುವುದಾಗಿ ಓಯೋ ಕಂಪೆನಿ ಹೇಳಿದೆ.
ಮದುವೆಯಾಗದವರಿಗೂ ಓಯೋ ಚೆಕ್ ಇನ್ ಗೆ ಅವಕಾಶ ನೀಡುತ್ತಿತ್ತು. ಹೀಗಾಗಿ ಅತೀ ಹೆಚ್ಚು ಗ್ರಾಹಕರನ್ನು ಓಯೋ ಹೊಂದಿತ್ತು. ಜೊತೆಗೆ ಬಹುಬೇಗನೇ ಜನಪ್ರಿಯವಾಗಿತ್ತು. ಓಯೋ ಸಂಸ್ಥೆಯು ನಗರಗಳಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು.
ಮದುವೆಯಾಗದ ಜೋಡಿಗೆ ಚೆಕ್ ಇನ್ ಗೆ ಅವಕಾಶ ನೀಡಬಾರದು ಎನ್ನುವ ಒತ್ತಾಯಗಳು ಕೇಳಿ ಬಂದ ಹಿನ್ನೆಲೆ ಓಯೋ ಕಂಪೆನಿಯು, ಹೊಸ ನಿಯಮ ಜಾರಿಗೆ ತಂದೆ ಎನ್ನಲಾಗಿದೆ. ಇನ್ನು ಮುಂದೆ ಓಯೋಗಳಲ್ಲಿ ಮದುವೆಯಾಗದ ಜೋಡಿಗಳಿಗೆ ಪ್ರವೇಶ ನೀಡುವುದನ್ನು ನಿಷೇಧಿಸುವ ನಿಯಮ ಆರಂಭಗೊಳ್ಳಲಿದ್ದು, ದೇಶದೆಲ್ಲೆಡೆ ಕಂಪೆನಿ ಈ ನಿಯಮ ಜಾರಿಗೊಳಿಸಲಿದೆಯಂತೆ!
ನೂತನ ನಿಯಮದ ಪ್ರಕಾರ ಹೊಟೇಲ್ ಬುಕ್ ಮಾಡುವ ಜೋಡಿಗಳು ತಮಗೆ ಸಂಬಂಧಿಸಿದ ದಾಖಲೆಗಳನ್ನು ತರಬೇಕು. ಹೊಟೇಲ್ ಗೆ ಬರುವ ಜೋಡಿಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಇಲ್ಲದಿದ್ದರೆ, ಅನುಮತಿ ನೀಡಲಾಗುವುದಿಲ್ಲ.
ನಾವು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ಕಾನೂನು ನಿಯಮ ಪಾಲನೆ, ಸಾರ್ವಜನಿಕರ ದೂರುಗಳನ್ನು ಆಲಿಸುವ ಮತ್ತು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತೇವೆ. ಕುಟುಂಬವೇ ಬರಲಿ, ಒಬ್ಬರೇ ಬರಲಿ, ಬ್ಯುಸಿನೆಸ್ ಮ್ಯಾನ್ ಬರಲಿ, ಧಾರ್ಮಿಕ ವ್ಯಕ್ತಿಯೇ ಬರಲಿ ಗ್ರಾಹಕರಿಗೆ ಸುರಕ್ಷತೆ ಅನುಭವ ಒದಗಿಸುವುದು ನಮ್ಮ ಆದ್ಯತೆ ಎಂದು ಓಯೋ ಉತ್ತರ ಭಾರತ ಪ್ರಾದೇಶಕ ಮುಖ್ಯಸ್ಥ ಪವಾಸ್ ಶರ್ಮಾ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: