ಲೆಬನಾನ್ ಸ್ಫೋಟ: ಕೃತ್ಯದ ಹಿಂದೆ ಕೇರಳ ವ್ಯಕ್ತಿಯ ಕಂಪನಿಯ ಪಾತ್ರ.?
ಲೆಬನಾನಿನಲ್ಲಿ ದಿನಗಳ ಹಿಂದೆ ಪೇಜರುಗಳು ಸ್ಫೋಟಗೊಂಡಿದ್ದು ಇದರ ಹಿಂದೆ ಕೇರಳದ ವ್ಯಕ್ತಿ ಒಬ್ಬರ ಕಂಪನಿಯ ಪಾತ್ರ ಇದೆ ಎಂದು ಹೇಳಲಾಗಿದೆ. ಈ ಕುರಿತಂತೆ ಬಲ್ ಗೇರಿಯಾ ತನಿಖೆಗೆ ಆದೇಶಿಸಿದೆ. ಹಿಝ್ಬುಲ್ಲಾಗೆ ಪೇಜರುಗಳನ್ನು ನೀಡಿರುವುದರಲ್ಲಿ ಕೇರಳೀಯ ಮತ್ತು ನಾರ್ವೆ ಪೌರನಾದ ರಿನ್ಸ್ ಜೋಸ್ ನ ಕಂಪನಿಗೆ ಸಂಬಂಧ ಇದೆಯೇ ಎಂದು ತನಿಖೆ ನಡೆಸಲಾಗುತ್ತಿದೆ.
ಬಲ್ಗೇರಿಯಾದಲ್ಲಿ ನೋಂದಣಿಯಾಗಿರುವ ನಾರ್ತ್ ಗ್ಲೋಬಲ್ ಲಿಮಿಟೆಡ್ ಎಂಬ ಕಂಪನಿಯ ಒಡೆಯರಾಗಿದ್ದಾರೆ ಈ ಜೋಸ್. ಇವರು ವಯನಾಡಿನವರು.. ಆದರೆ ಪೇಜರ್ ನಲ್ಲಿ ಸ್ಪೋಟಕಗಳನ್ನು ಇಸ್ರೇಲ್ ಇರಿಸಿರುವ ಬಗ್ಗೆ ಈ ಜೋಸ್ ಗೆ ಗೊತ್ತಿಲ್ಲ ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿದೆ. ಇದನ್ನು ತಯಾರಿಸಿದ ಕಂಪನಿಯ ಜೊತೆ ಈ ಕಂಪನಿಗೆ ಒಡನಾಟ ಇದೆ ಎಂದು ಹೇಳಲಾಗಿದೆ.
ತೈವಾನ್ ನಿಂದ ಪೇಜರುಗಳನ್ನು ತಂದು ಹಿಝ್ಬುಲ್ಲಾಗೆ ಕೊಟ್ಟಿರುವುದು ಇವರ ಕಂಪನಿ ಎಂದು ಹೇಳಲಾಗುತ್ತಿದೆ. ಪೇಜರುಗಳನ್ನು ಈ ಜೋಸ್ ಅವರ ಕಂಪನಿಯೇ ತಯಾರಿಸಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಜೋಸ್ ತಪ್ಪು ಮಾಡಿದ್ದಾರೆಂದು ನಮಗೆ ಅನಿಸುತ್ತಿಲ್ಲ ಆತನನ್ನು ಯಾರೋ ವಂಚಿಸಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth