ಲೋಕ ರಿಸಲ್ಟ್: ಯಾವುದೇ ಪಕ್ಷಕ್ಕೆ ಸಿಗದ ಸ್ವಂತ ಬಹುಮತ - Mahanayaka

ಲೋಕ ರಿಸಲ್ಟ್: ಯಾವುದೇ ಪಕ್ಷಕ್ಕೆ ಸಿಗದ ಸ್ವಂತ ಬಹುಮತ

04/06/2024

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ವಂತ ಬಹುಮತ ಪಡೆದಿಲ್ಲ. ಬಿಜೆಪಿ ಗೆಲುವು ಸಾಧಿಸಿದ ಕ್ಷೇತ್ರಗಳ ಪೈಕಿ 20ರಲ್ಲಿ 10,000ಕ್ಕೂ ಕಡಿಮೆ ಮತಗಳ ಅಂತರದಿಂದ ಗೆದ್ದಿದೆ. ಕಾಂಗ್ರಸ್‌ ಗೆಲುವು ಸಾಧಿಸಿರುವ 97 ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಗೆಲುವಿನ ಪ್ರಮಾಣ 2000ಕ್ಕಿಂತಲೂ ಕಡಿಮೆ ಇದೆ.


Provided by

11 ಕ್ಷೇತ್ರಗಳಲ್ಲಿ ಬಿಜೆಪಿಯ ಅಂತರ 5000ಕ್ಕೂ ಕಡಿಮೆಯಾಗಿದೆ, ಆರರಲ್ಲಿ ಮುನ್ನಡೆ 2000ಕ್ಕೂ ಕಡಿಮೆ ಹಾಗೂ ಮೂರರಲ್ಲಿ 1,000ಕ್ಕೂ ಕಡಿಮೆ ಮತಗಳ ಗೆಲುವು ಬಿಜೆಪಿಗೆ ದಕ್ಕಿದೆ.

ಕಾಂಗ್ರೆಸ್‌ ಗೆ ಎಂಟು ಕ್ಷೇತ್ರಗಳಲ್ಲಿ ಗೆಲುವಿನ ಮತಗಳು 5000ಕ್ಕೂ ಕಡಿಮೆ ಹಾಗೂ 12 ಸ್ಥಾನಗಳಲ್ಲಿ 10,000ಕ್ಕೂ ಕಡಿಮೆ ಮತಗಳ ಗೆಲುವು ಸಾಧಿಸಿದೆ.
ಸಮಾಜವಾದಿ ಪಕ್ಷ ಗೆಲುವು ಸಾಧಿಸಿರುವ 36 ಕ್ಷೇತ್ರಗಳಲ್ಲಿ ಎರಡರಲ್ಲಿ 5000ಕ್ಕೂ ಕಡಿಮೆ ಮತಗಳ ಮುನ್ನಡೆಯಿದ್ದು ನಾಲ್ಕು ಕಡೆ 10,000ಕ್ಕೂ ಕಡಿಮೆ ಮತಗಳ ಅಂತರದ ಗೆಲುವು ಸಾಧಿಸಿದೆ..

ಟಿಎಂಸಿ ಗೆದ್ದಿರುವ 31 ಸ್ಥಾನಗಳಲ್ಲಿ ಎರಡರಲ್ಲಿ ಗೆಲುವಿನ ಮತಗಳ ಸಂಖ್ಯೆ 5000ಕ್ಕೂ ಕಡಿಮೆ ಇದೆ. ಡಿಎಂಕೆಯಒಂದು ಸ್ಥಾನದಲ್ಲಿ ಗೆಲುವಿನ ಮತಗಳ ಸಂಖ್ಯೆ 10,000ಕ್ಕೂ ಕಡಿಮೆ ಇದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ