ಎರಡು ಟೂರಿಸ್ಟ್ ಕಾರುಗಳ ಮೇಲೆ ಉರುಳಿ ಬಿದ್ದ ಭತ್ತದ ಮೂಟೆ ಹೊತ್ತ ಲಾರಿ
ಉಡುಪಿಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ಭತ್ತದ ಮೂಟೆ ಹೊತ್ತ ಲಾರಿ ಚಾಲಕನ ನಿಯಂತ್ರಣ ತಪ್ಪಿ ಎರಡು ಟೂರಿಸ್ಟ್ ಕಾರಿನ ಮೇಲೆಯೇ ಎರಗಿದ ಪರಿಣಾಮ ಒಂದು ಕಾರು ಸಂಪೂರ್ಣ ಜಖಂಗೊಂಡ ಘಟನೆ ಕೆಳಪರ್ಕದಲ್ಲಿರುವ ನಗರಸಭೆಯ ನೀರಿನ ರೇಚಕದ ಎದುರು ಭಾನುವಾರ ತಡರಾತ್ರಿ ನಡೆದಿದೆ.
ಭತ್ತದ ಮೂಟೆ ಲಾರಿಯಿಂದ ಬೇರ್ಪಟ್ಟು ರಸ್ತೆಯೆಲ್ಲ ಚೆಲ್ಲಾಡಿದೆ. ವಾಹನದಲ್ಲಿರುವರು ಅಪಾಯದಿಂದ ಪಾರಾಗಿದ್ದಾರೆ. ಒಂದು ಟೂರಿಸ್ಟ್ ಕಾರು ಉಡುಪಿಯ ನಿಲ್ದಾಣಕ್ಕೆ ಸೇರಿದರೆ, ಮತ್ತೊಂದು ಸಂತೆಕಟ್ಟೆಯ ನಿಲ್ದಾಣಕ್ಕೆ ಸೇರಿದೆ. ಉಡುಪಿಯಿಂದ ಪರ್ಕಳದ ಕಡೆ ಸಂಚರಿಸುವ ಬೇರೆ ಜಿಲ್ಲೆಯ ಹಾಗೂ ಅನ್ಯ ರಾಜ್ಯದ ವಾಹನ ಚಾಲಕರಿಗೆ ಇಲ್ಲಿ ಗೊಂದಲ ಉಂಟಾಗುತ್ತದೆ. ಹೊಸ ರಸ್ತೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಳೆದ 15 ದಿನಗಳಿಂದ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ವಾಹನ ಸಂಚಾರದಿಂದ ಧೂಳು ಏಳುತ್ತವೆ ಎಂದು ಸ್ಥಳೀಯರು ರವಿವಾರ ಮಣೆಪಾಲ ಠಾಣೆಗೆ ದೂರು ನೀಡಿದ್ದಾರೆ. ಇಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ ಮತ್ತು ಇಲ್ಲಿದ್ದ ರಕ್ಷಣಾ ಬ್ಯಾರಿಕೇಡ್ಗಳನ್ನು ತೆಗೆಯಲಾಗಿದೆ. ಸೂಕ್ತ ಬೆಳಕಿನ ವ್ಯವಸ್ಥೆಯು ಇಲ್ಲ. ವಾಹನ ಚಾಲಕರು ಹಳೆ ರಸ್ತೆಯಲ್ಲಿ ಸಂಚರಿಸುವುದೇ ಹೊಸ ರಸ್ತೆಯಲ್ಲಿ ಸಂಚರಿಸುವುದೇ ಎಂಬ ಗೊಂದಲ ಉಂಟುಮಾಡುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ರೀತಿ ಹಿಂದೆಯೂ ಈ ಭಾಗದಲ್ಲಿ ವಾಹನ ಅಪಘಾತ ಘಟನೆ ನಡೆದಿದೆ ಹೊಸ ರಸ್ತೆಯ ಕಾಮಗಾರಿಯೇ ನಡೆಸುತ್ತಿರುವಾಗಲೇ ವಾಹನ ಸಂಚಾರ ಮಾಡಿ ಕೊಟ್ಟಿರುವುದೇ ಇಲ್ಲಿ ಸಮಸ್ಯೆ ಕಂಡು ಬಂದಿದೆ. ಕೆಳಪರ್ಕದ ಹಳೆ ರಸ್ತೆಗೆ ಸಂಪರ್ಕಿಸುವ ಎರಡು ರಸ್ತೆಗಳು ಸಂಪೂರ್ಣ ಹಾಳಾಗಿದೆ. ಹೀಗಾಗಿ ಇಲ್ಲಿ ಹಳೆ ರಸ್ತೆ ಯಾವುದು ಹೊಸ ರಸ್ತೆ ಯಾವುದು ಗೊತ್ತಾಗುವುದಿಲ್ಲ. ಶಾಸಕರು 15 ದಿನದೊಳಗೆ ಕಾಂಕ್ರೀಟ್ ರಸ್ತೆಯನ್ನು ಹಳೆ ರಸ್ತೆ ಸಂಪರ್ಕಿಸುವಂತೆ ಮಾಡಲಾಗು ವುದುೆ ಎಂದು ಭರವಸೆ ನೀಡಿದ್ದರು. ಭರವಸೆ ನೀಡಿ ಆರು ತಿಂಗಳು ಕಳೆದಿದೆ ಎಂದು ದೂರಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka