‘ಮಸೀದಿಗೆ ನುಗ್ಗಿ ಮುಸ್ಲಿಮರ ಹತ್ಯೆ ಮಾಡುವೆ’ ಎಂದ ಬಿಜೆಪಿ ಶಾಸಕ..!

ಮಸೀದಿಗೆ ನುಗ್ಗಿ ಮುಸ್ಲಿಮರ ಹತ್ಯೆ ಮಾಡುವೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣ ಬೆದರಿಕೆ ಹಾಕಿದ್ದಾರೆ. ಪ್ರವಾದಿ ಮುಹಮ್ಮದರ ವಿರುದ್ಧ ನಿಂದನಾತ್ಮಕ ಮಾತನ್ನಾಡಿರುವ ರಾಮಗಿರಿ ಮಹಾರಾಜ್ ಗೆ ಬೆಂಬಲವಾಗಿ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದ ಸಕಾಲ್ ಹಿಂದು ಸಮಾಜ್ ರ್ಯಾಲಿಯಲ್ಲಿ ಮಾತಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
ನಮ್ಮ ಮಹಾ ರಾಜರ ವಿರುದ್ಧ ಯಾರಾದರೂ ಬೀದಿಗಿಳಿದರೆ ಅವರ ಮನೆಗೆ ನುಗ್ಗಿಕೊಲ್ಲುತ್ತೇವೆ ಎಂದು ಅವರು ಬೆದರಿಕೆ ಹಾಕಿದ್ದಾರೆ. ಅಹಮದನಗರ ಜಿಲ್ಲೆಯ ಶ್ರೀರಾಂಪುರ ಮತ್ತು ತೋಪ ಖಾನ ಎಂಬ ಎರಡು ಪ್ರದೇಶಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು. ಅನೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಚಪ್ಪಾಳೆ ಯೊಂದಿಗೆ ಇವರ ಈ ಬೆದರಿಕೆಯ ಮಾತನ್ನು ಬೆಂಬಲಿಸಿರುವುದಾಗಿ ಕೂಡ ವಿಡಿಯೋದಲ್ಲಿ ಗೊತ್ತಾಗುತ್ತದೆ.
ಇವರ ಈ ಭಾಷಣದ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿ ರುವುದಾಗಿ ಅಹಮದನಗರ ಪೊಲೀಸರು ತಿಳಿಸಿದ್ದಾರೆ.. ಈ ಹಿಂದೆ ಇವರು ಇಂತಹದ್ದೇ ದ್ವೇಷ ಭಾಷಣ ಮಾಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth