ಅಪಪ್ರಚಾರ ಆರೋಪ: 3 ನ್ಯೂಸ್ ಚಾನೆಲ್‌ಗಳಿಗೆ ತನ್ನ ವಕ್ತಾರರನ್ನು ಕಳುಹಿಸಿಕೊಡದಿರಲು ಟಿಎಂಸಿ ನಿರ್ಧಾರ
ಪಶ್ಚಿಮ ಬಂಗಾಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಮೂರು ನ್ಯೂಸ್ ಚಾನೆಲ್‌ಗಳಿಗೆ ತನ್ನ ವಕ್ತಾರರನ್ನು ಕಳುಹಿಸಿಕೊಡದಿರಲು ತೃಣಮೂಲ ಕಾಂಗ್ರೆಸ್ ಘೋಷಿಸಿದೆ. ಎಬಿಪಿ ಆನಂದ್, ರಿಪಬ್ಲಿಕ್ ಮತ್ತು ಟಿವಿ9 ಚಾನೆಲ್ ಗಳಿಗೆ ತನ್ನ ವಕ್ತಾರರನ್ನು ಕಳುಹಿಸದಿರಲು ಮಮತಾ ಬ್ಯಾನರ್ಜಿ ಪಕ್ಷ ನಿರ್ಧರಿಸಿದೆ. ದೆಹಲಿಯ ಯಜಮಾನರನ್ನು ತೃಪ್ತಿಪಡಿಸುವ ನಿಮ್ಮ ಅನಿವಾರ್ಯತೆ ನಮಗೆ ಗೊತ್ತಾಗಿದೆ ಎಂದು ತೃಣಮೂಲ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಮೂರು ಟಿವಿ ಚಾನಲ್‌ಗಳ ಚರ್ಚಾ ವೇದಿಕೆಗಳಲ್ಲಿ ಪಕ್ಷಕ್ಕೆ ಸಂಬಂಧಿಸಿದವರು ಯಾರೂ ಭಾಗವಹಿಸುವುದಿಲ್ಲ ಮತ್ತು ಯಾರಾದರೂ ಭಾಗವಹಿಸಿದರೆ ಅವರು ತೃಣಮೂಲ ಕಾಂಗ್ರೆಸ್ಸಿನ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಎಬಿಪಿ ಆನಂದ್ ನಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೃಣ ಮೂಲ ವಕ್ತಾರರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಹಾಗೆಯೇ ಈ ಟಿವಿ ಚಾನೆಲ್ ಗಳು ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಹಾಳು ಮಾಡುವುದಕ್ಕೆ ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿವೆ ಎಂಬ ಆರೋಪ ಕೂಡ ಇದೆ.. ಈ ಎಲ್ಲ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth