ಮಹಾರಾಷ್ಟ್ರ ಚುನಾವಣಾ ಫಲಿತಾಂಶ: 10 ಮಂದಿ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆ
288 ಸದಸ್ಯರಿರುವ ಮಹಾರಾಷ್ಟ್ರ ವಿಧಾನಸಭೆಗೆ ಕೇವಲ 10 ಮಂದಿ ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 12 ಶೇಕಡಾ ಮುಸ್ಲಿಮರಿದ್ದಾರೆ. ಆದರೆ ಈ ಜನಸಂಖ್ಯೆಗೆ ಹೋಲಿಸಿದರೆ ಕೇವಲ 3.5% ಪ್ರಾತಿನಿಧ್ಯ ಮಾತ್ರ ವಿಧಾನಸಭೆಯಲ್ಲಿ ಮುಸ್ಲಿಮರಿಗೆ ಲಭ್ಯವಾದಂತಾಗಿದೆ. ಈ ಬಾರಿ 420 ಮುಸ್ಲಿಂ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು ಇವರಲ್ಲಿ 218 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಇತರ ಸಣ್ಣಪುಟ್ಟ ಪಕ್ಷಗಳು 150 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.ಮುಖ್ಯ ಪಕ್ಷಗಳು ಬೆರಳೆಣಿಕೆಯ ಸ್ಥಾನಗಳನ್ನಷ್ಟೇ ಮುಸ್ಲಿಂರಿಗೆ ನೀಡಿತ್ತು.
ಓವೈಸಿ ಅವರ ಪಕ್ಷವು ಅತ್ಯಧಿಕ ಅಂದರೆ 12 ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. ಕಾಂಗ್ರೆಸ್ ಒಂಬತ್ತು ಮಂದಿಯನ್ನು ಕಣಕ್ಕಿಳಿಸಿತ್ತು. ಅಜಿತ್ ಪವಾರ್ ಅವರ ಪಕ್ಷವು ಐದು ಮಂದಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಸಾಕಷ್ಟು ಕಡೆಗಳಲ್ಲಿ ಮುಸ್ಲಿಂ ಸಮುದಾಯದ ಮತ ವಿಭಜನೆಯಾಗಿರುವುದು ಫಲಿತಾಂಶದಿಂದ ಗೊತ್ತಾಗಿದೆ. ಮಾಲೇಗಾಂವ್ ಕ್ಷೇತ್ರದಲ್ಲಿ ಒವೈಸಿ ಅವರ ಪಕ್ಷದ ಮುಫ್ತಿ ಅಬ್ದುಲ್ ಖಾಲಿಕ್ ಅವರು ಕೇವಲ 75 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹಾಗೆಯೇ ಶಿವಸೇನೆ ಎನ್‌ಸಿಪಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದಿಂದ ಒಬ್ಬೊಬ್ಬ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಆಡಳಿತರೂಢ ಮೈತ್ರಿಕೂಟದ ಭಾಗವಾಗಿರುವ ಅಜಿತ್ ಪವಾರ್ ಅವರಿಗೆ ಮುಸ್ಲಿಂ ಸಮುದಾಯದಲ್ಲಿ ಒಳ್ಳೆಯ ವರ್ಚಸ್ಸು ಇದ್ದು, ಈ ವರ್ಚಸ್ಸು ಮಹಾಯುತಿ ಸರಕಾರದ ಪರ ಮುಸ್ಲಿಂ ಸಮುದಾಯ ಮತ ಚಲಾಯಿಸುವುದಕ್ಕೆ ಪ್ರೇರಣೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj