ಡಿಜೆ ಸೌಂಡ್ ಗೆ ನಗುನಗುತಾ ಕುಣಿಯುತ್ತಿದ್ದ ವ್ಯಕ್ತಿ, ಏಕಾಏಕಿ ಹೃದಯಾಘಾತದಿಂದ ಸಾವು!
30/09/2024
ಚಾಮರಾಜನಗರ: ಡಿ.ಜೆ.ಶಬ್ದಕ್ಕೆ ಕುಣಿಯುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.
ಬಾಬು (42) ಮೃತಪಟ್ಟವರಾಗಿದ್ದಾರೆ. ಗ್ರಾಮದಲ್ಲಿ ಗೌರಿ ವಿಸರ್ಜನೆ ಅಂಗವಾಗಿ ಕಲ್ಯಾಣ ಬಸವೇಶ್ವರ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಬು ಅವರು ಎಲ್ಲರೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದರು.
ಏಕಾಏಕಿ ಅವರು ಸುಸ್ತಾದವರಂತೆ ಕಂಡು ಬಂದಿತ್ತು. ನಗುಮುಖದಿಂದಲೇ ಡಿಜೆ ಸೌಂಡ್ ಗೆ ಡಾನ್ಸ್ ಮಾಡುತ್ತಿದ್ದ ಬಾಬು ಅವರು ಏಕಾಏಕಿ ಸುಸ್ತಾಗಿ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: