ಮನೆಗೆ ಅಕ್ರಮವಾಗಿ ಪ್ರವೇಶಿಸಿ ಇಬ್ಬರ ಮೇಲೆ ಹಲ್ಲೆ - Mahanayaka
10:04 PM Wednesday 22 - October 2025

ಮನೆಗೆ ಅಕ್ರಮವಾಗಿ ಪ್ರವೇಶಿಸಿ ಇಬ್ಬರ ಮೇಲೆ ಹಲ್ಲೆ

vittal news
14/08/2022

ವಿಟ್ಲ: ಜಾಗದ ವಿಷಯವಾಗಿ ವ್ಯಕ್ತಿಯೋರ್ವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಚಂದಳಿಕೆ ಸಮೀಪದ ಕುರುಂಬಲ ಎಂಬಲ್ಲಿ ನಡೆದಿದೆ.

ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿ, ಹಲ್ಲೆಗೊಳಗಾದವರು. ಜಾಗದ ವಿಷಯವಾಗಿ ಜಗಳ ನಡೆದು ಮನೆಗೆ ಅಕ್ರಮ ಪ್ರವೇಶ ಮಾಡಿದ ಪುನೀತ್ ಜೋಗಿ ಮತ್ತು ತ್ಯಾಗರಾಜ್ ಎಂಬುವವರು ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿ ರವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ