ಮಂಗಳೂರು ನ್ಯಾಯಾಲಯ ಸಂಕೀರ್ಣ: ವಕೀಲರು ಸಹಿತ ಸಾರ್ವಜನಿಕರಿಗೆ ಮುಚ್ಚಿದ ಮುಖ್ಯದ್ವಾರ
ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯದ ಕಟ್ಟಡದ ಮುಖ್ಯದ್ವಾರದಲ್ಲಿ ಕೇವಲ ನ್ಯಾಯಾಧೀಶರಿಗೆ ಮಾತ್ರ ಪ್ರವೇಶ…
ಹೌದು…! ನ್ಯಾಯಾಲಯ ಕಟ್ಟಡವು ಸರಕಾರಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಹೊಂದಿರುವ ಕಟ್ಟಡವಾಗಿದ್ದರೂ ಕೂಡ ದ.ಕ. ಜಿಲ್ಲಾ ನ್ಯಾಯಾಧೀಶರು ಮಂಗಳೂರಿನಲ್ಲಿ ಇರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಮುಖ್ಯದ್ವಾರ ಕೇವಲ ನ್ಯಾಯಾದೀಶರಿಗೆ ಮಾತ್ರ ಪ್ರವೇಶ ಎನ್ನುವ ಹೊಸ ನಿಯಮ ಜಾರಿ ಮಾಡಿದ್ದು, ವಕೀಲರು ಸಹಿತ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹಾಕಿರುವಂತದ್ದು ವಕೀಲ ಸಮುದಾಯದಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟಿಹಾಕಿದೆ.
ನ್ಯಾಯಾಂಗದ ಅಂಗವಾಗಿರುವ ನ್ಯಾಯವಾದಿಗಳಿಗೂ ಕೂಡ ಪ್ರವೇಶ ನಿರ್ಬಂದಿಸಿರುವ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಎಂ ಜೋಶಿ ಯವರ ಕ್ರಮ ತೀವ್ರ ಟೀಕೆಗೆ ಒಳಗಾಗಿದೆ. ತಕ್ಷಣ ಈ ನಾಮಫಲಕವನ್ನು ತೆರವು ಗೊಳಿಸುವಂತೆ ಈಗಾಗಲೇ ವಕೀಲರ ಸಂಘ ಒತ್ತಾಯಿಸಿದೆ.
ಆದರೆ, ವಕೀಲರ ಸಂಘದ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗಿದ್ದು, ಈ ಬಗ್ಗೆ ಚರ್ಚೆ ನಡೆಸಲು ಮುಂದಿನ ವಾರ ವಕೀಲರ ಸಭೆ ಕೂಡ ಕರೆಯಲಾಗಿದೆ ಎನ್ನುವ ಮಾಹಿತಿ ದೊರಕಿದ್ದು. ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದ ನಿರ್ಬಂಧದ ನಿಯಮ ಜಾರಿಯ ಮೊದಲ ದಿನವಾದ ಸೋಮವಾರ (ನಾಳೆ) ಏನಾಗುತ್ತದೆ ಎಂದು ಕಾದು ನೋಡಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka