ಮೀನು ಸಾಗಾಟದ ಟೆಂಪೋ, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು - Mahanayaka
4:41 AM Thursday 13 - February 2025

ಮೀನು ಸಾಗಾಟದ ಟೆಂಪೋ, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

uppinangady
19/10/2021

ಉಪ್ಪಿನಂಗಡಿ: ಟೆಂಪೋ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯ ಪರಿಣಾಮವಾಗಿ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರನೋರ್ವ ದಾರುಣವಾಗಿ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ ಮಂಗಳವಾರ ನಡೆದಿದೆ.

ಮಂಗಳೂರಿನ ಕುಂಟಲ್ಪಾಡಿಪದವು ನಿವಾಸಿ 29 ವರ್ಷ ವಯಸ್ಸಿನ ಸಚಿನ್ ಮೃತಪಟ್ಟ ಬೈಕ್ ಸವಾರನಾಗಿದ್ದು, ಈತನೊಂದಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿಯ ಅಂಕಿತ್ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಯ ಪ್ರಕಾರ, ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುತ್ತಿದ್ದ ಮೀನು ಸಾಗಾಟದ ಟೆಂಪೋ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಪರಿಣಾಮವಾಗಿ ದ್ವಿಚಕ್ರ ಸವಾರರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಈ ವೇಳೆ ಸಚಿನ್ ನ ತಲೆಯ ಮೇಲೆ ಟೆಂಪೋ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತದ ಬಳಿಕ ಟೆಂಪೋ ಸಮೀಪದ ತೋಡಿಗೆ ಇಳಿದಿದೆ. ಘಟನೆ ಸಂಬಂಧ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ನಿಷ್ಪಕ್ಷಪಾತ ನಿಲುವಿನ ನಿಮ್ಮ ಮಹಾನಾಯಕ ಮಾಧ್ಯಮವು 1 ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಯಾವುದೇ ಪಕ್ಷಗಳ, ರಾಜಕಾರಣಿಗಳ ಅಡಿಯಾಳಾಗದೇ ತನ್ನದೇ ಮಾರ್ಗದಲ್ಲಿ ಸಾಗುತ್ತಿರುವ ಮಹಾನಾಯಕ ಮಾಧ್ಯಮಕ್ಕೆ ಓದುಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಸಮಾನತೆಯನ್ನು ಸಾಧಿಸುವ ಧ್ಯೇಯದೊಂದಿಗೆ ಸಾಗುತ್ತಿರುವ ಮಾಧ್ಯಮವು ಈ ಒಂದು ವರ್ಷದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ಎದೆಗುಂದದೇ ಮಾಧ್ಯಮ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ. ಮಾಧ್ಯಮ ಒಂದು ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಮಾಧ್ಯಮದ ಮೇಲೆ ಓದುಗರ ನಿರೀಕ್ಷೆ ಕೂಡ ಹೆಚ್ಚಿದೆ. ಹಾಗಾಗಿ ಮುಂದಿನ ಹಂತದಲ್ಲಿ ಮಾಧ್ಯಮವನ್ನು ಇನ್ನಷ್ಟು ದೊಡ್ಡಮಟ್ಟಕ್ಕೆ ತಲುಪಿಸಲು ಓದುಗರು ಹಾಗೂ ಸಮಾನ ಮನಸ್ಕರ ನೆರವು ಕೂಡ ಅಗತ್ಯವಾಗಿದೆ. ಮಹಾನಾಯಕ ಮಾಧ್ಯಮಕ್ಕೆ ನಿಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನೆರವು ನೀಡುವಂತೆ ಮನವಿ ಮಾಡುತ್ತಿದ್ದೇವೆ. ಮಾಧ್ಯಮಕ್ಕೆ ಆರ್ಥಿಕ ನೆರವು ನೀಡಲು ಬಯಸುವವರು 9686872149ಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಮಾಡಬಹುದಾಗಿದೆ. 

ಇತ್ತೀಚಿನ ಸುದ್ದಿ