45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯ ಮದುವೆ: ಈ ಚಿತ್ರದ ಅಸಲಿ ಕಥೆ ಏನು? - Mahanayaka

45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯ ಮದುವೆ: ಈ ಚಿತ್ರದ ಅಸಲಿ ಕಥೆ ಏನು?

shankaranna meghana
19/10/2021


Provided by

ತುಮಕೂರು:  45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು 25 ವರ್ಷ ವಯಸ್ಸಿನ ಯುವತಿಯನ್ನು ವಿವಾಹವಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ವೈರಲ್ ಆಗಿತ್ತು. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ. ಅಷ್ಟಕ್ಕೂ ಈ ಚಿತ್ರದ ಹಿಂದಿನ ಕಥೆ ಏನು ಎನ್ನುವುದು ಇದೀಗ ಬಯಲಾಗಿದೆ.


Provided by

ಈ ಫೋಟೋದಲ್ಲಿರುವವರು ಗುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯ ಅಕ್ಕಿಮರಿಪಾಳ್ಯದ ಶಂಕರಣ್ಣ ಹಾಗೂ ಮೇಘನಾ ಎಂಬ ಯುವತಿಯಾಗಿದ್ದಾರೆ. ಇವರಿಬ್ಬರು ಕೂಡ ಪರಸ್ಪರ ಒಪ್ಪಿಗೆಯಿಂದಲೇ ವಿವಾಹವಾಗಿದ್ದಾರೆ. ನಮ್ಮ ದೇಶದ ಕಾನೂನಿನಲ್ಲಿ ಅಪ್ರಾಪ್ತ ವಯಸ್ಕರು ವಿವಾಹವಾಗುವುದು ಕಾನೂನು ಬಾಹಿರವೇ ಹೊರತು, ಪ್ರಬುದ್ಧತೆ ಹೊಂದಿರುವ ಯುವಕ, ಯುವತಿಯರು, ತಾವು ಇಷ್ಟಪಡುವ ಯಾವುದೇ ವಯೋಮಿತಿಯ ವ್ಯಕ್ತಿಗಳೊಂದಿಗೆ ವಿವಾಹವಾಗಬಹುದು. ಆದರೆ, ನಮ್ಮ ಸಮಾಜದಲ್ಲಿ ಕೆಲವರ ಮನಸ್ಥಿತಿ ಹಾಗೂ ಪರಿಸ್ಥಿತಿ ಹೇಗಿದೆ ಎಂದರೆ, ಅವನ ಮನೆಯಲ್ಲಿ ಸಾವಿರ ಸಮಸ್ಯೆಗಳಿದ್ದರೂ, ಆತ ನೆರೆಯ ಮನೆಯವರದ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾನೆ. ಇನ್ನೊಬ್ಬರ ಜೀವನದಲ್ಲಿ ಹಸ್ತಕ್ಷೇಪ ಮಾಡುವುದು, ಅಧಿಕಾರ ಚಲಾಯಿಸಲು ನೋಡುವುದು, ವ್ಯಂಗ್ಯವಾಡುವುದು, ನೋಡಿ ನಗುವುದು, ಈಗ ಅದರ ಜೊತೆಗೆ ಟ್ರೋಲ್ ಗಳು ಬೇರೆ ಸೇರಿಕೊಂಡಿವೆ. ಇಂತಹ ಮನಸ್ಥಿತಿಗಳ ನಡುವೆ ಶಂಕರಣ್ಣ ಹಾಗೂ ಮೇಘನಾ ಹೆಚ್ಚು ಚರ್ಚೆಗೀಡಾಗಿದ್ದಾರೆ.

ಮೇಘನಾ ತಾನೇ ಸ್ವತಃ ಮೆಚ್ಚಿ ಶಂಕರಣ್ಣ ಎಂಬವರನ್ನು ವಿವಾಹವಾಗಿದ್ದಾರೆ. ಶಂಕರಣ್ಣ ಅವರು, ಈವರೆಗೆ ಮದುವೆಯಾಗದೇ ಉಳಿದುಕೊಂಡಿದ್ದರು. ಮೇಘನಾ ಅವರು ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದಾರೆ. ವರದಿಗಳ ಪ್ರಕಾರ ಮೇಘನಾ ಅವರಿಗೆ ಇದಕ್ಕೂ ಮೊದಲು ಒಂದು ವಿವಾಹವಾಗಿದೆ. ಆದರೆ, ಅವರ ಪತಿ ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಇನ್ನೊಂದು ಮದುವೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಶಂಕರಣ್ಣ ಹಾಗೂ ಮೇಘನಾ ವಿವಾಹವಾಗಿದ್ದಾರೆ ಎನ್ನಲಾಗಿದೆ.


Provided by

ಇವರ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದ್ದು, ಏನೂ ಆಗಬಾರದ್ದು ನಡೆದಿದೆ ಎಂಬಂತೆ ಕೆಲವರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ತನ್ನ ಮನೆ ಸಮಸ್ಯೆಗಳಿಂದ ತುಂಬಿದ್ದರೂ ಇನ್ನೊಬ್ಬರ ಜೀವನದ ಬಗ್ಗೆ ಮಾತನಾಡುವುದೆಂದರೆ, ಪರಮ ಸುಖ ಅಲ್ಲವೇ? ಸಹಜವಾಗಿ ಈ ಜೋಡಿಯ ವಿಚಾರದಲ್ಲಿಯೂ ಅದೇ ನಡೆದಿದೆ ಎನ್ನುವ ಮಾತುಗಳು ಕೂಡ ಪ್ರಜ್ಞಾವಂತರಿಂದ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಸಿದ್ದರಾಮಯ್ಯ ‘ಸಾಬ್ರಕಾ ಸಾತ್, ಸಾಬ್ರಕಾ ವಿಕಾಸ್’ ಅನ್ನುತ್ತಿದ್ದಾರೆ | ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ಮೀನು ಸಾಗಾಟದ ಟೆಂಪೋ, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಸಂಘ ಸಂಸ್ಕಾರ ಪಡೆದು ಅಶ್ಲೀಲ ದೃಶ್ಯ, ಸಿಡಿ ಸುಳಿಯಲ್ಲಿ ಸಿಲುಕಿದವರು ಯಾರು?… ಸದಾನಂದ ಪರಿವಾರ | ಜೆಡಿಎಸ್ ಕಿಡಿ

ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ | ಮಂಗಳೂರಿನ ಖ್ಯಾತ ವಕೀಲನ ವಿರುದ್ಧ ದೂರು

ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? | ರಮೇಶ್ ಜಾರಕಿಹೊಳಿ

ದೇವರ ದರ್ಶನಕ್ಕೆ ಹೋದ ಸ್ವಾಮೀಜಿಯನ್ನು ದರದರನೇ ಎಳೆದೊಯ್ದ ದೇವಸ್ಥಾನದ ಸಿಬ್ಬಂದಿ: ವಿಡಿಯೋ ವೈರಲ್

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ಇತ್ತೀಚಿನ ಸುದ್ದಿ