ಮಂಗಳೂರಿಗೆ ಮತ್ತೊಮ್ಮೆ ಮೋದಿ ಬರ್ಲಿ, ರೋಡ್ ಸರಿಯಾಗಲಿ: ಯುವಕನಿಂದ ಏಕಾಂಗಿ ಪ್ರತಿಭಟನೆ - Mahanayaka

ಮಂಗಳೂರಿಗೆ ಮತ್ತೊಮ್ಮೆ ಮೋದಿ ಬರ್ಲಿ, ರೋಡ್ ಸರಿಯಾಗಲಿ: ಯುವಕನಿಂದ ಏಕಾಂಗಿ ಪ್ರತಿಭಟನೆ

likhith rai
28/09/2022

ಕೆಲ ಸಮಯದ ಹಿಂದೆ ಮಂಗಳೂರು ನಗರದ ರಸ್ತೆಯ ಅವ್ಯವಸ್ಥೆಯಿಂದಾಗಿ ಅಪಘಾತಕ್ಕೀಡಾಗಿ ಮೃತಪಟ್ಟ ಯುವಕನ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಮಂಗಳೂರಲ್ಲಿ ಏಕಾಂಗಿ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದ ಯುವಕ ಲಿಖಿತ್ ರೈ ಇಂದು ಮತ್ತೆ ಪ್ರತಿಭಟನೆ ನಡೆಸಿದರು.

‘ಮೋದಿ ಹೆ ತೋ ಮುಮ್ಕಿನ್ ಹೆ’ ಎಂಬ ಬ್ಯಾನರ್ ಹಿಡಿದು ನಂತೂರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಲಿಖಿತ್‌ ರೈ ಪ್ರಧಾನಿ ಮೋದಿಯವರು ಮತ್ತು ಮಂಗಳೂರಿಗೆ ಬನ್ನಿ ಆ ಮೂಲಕವಾದರೂ ರಸ್ತೆಗಳ ಹೊಂಡ ಮುಚ್ಚಲಿ ಎಂದು ಆಗ್ರಹಿಸಿದರು.

‘ರಾಷ್ಟ್ರೀಯ ಹೆದ್ದಾರಿಗಳು, ನಗರದ ರಸ್ತೆಗಳು ಮತ್ತೆ ಹೊಂಡಗಳಿಂದ ತುಂಬಿದ್ದರೂ ಯಾರೂ ಕೇಳುವವರಿಲ್ಲ. ಕೆಲ ಸಮಯದ ಹಿಂದೆ ನಾನು ರಸ್ತೆಗಿಳಿದು ಪ್ರತಿಭಟಿಸಿದ ಬಳಿಕ ಕೆಲವೆಡೆ ರಸ್ತೆ ದುರಸ್ತಿ ಕಾರ್ಯ, ಹೊಂಡ ತುಂಬಿಸುವ ಕಾರ್ಯ ಮಾಡಲಾಗಿತ್ತು. ಮತ್ತೆ ಅದೇ ಪರಿಸ್ಥಿತಿ. ಮಾಡಿರುವ ಪ್ಯಾಚ್‌ವರ್ಕ್ ಎದ್ದು ಹೋಗಿದೆ. ಪ್ರಧಾನಿ ಮೋದಿಯವರು ಮಂಗಳೂರಿಗೆ ಬರುವಾಗ ಎರಡು ದಿನದಲ್ಲಿ ಅವರು ಬರುವ ಕೂಳೂರು ರಸ್ತೆಯನ್ನು ಮೇಕಪ್ ಮಾಡಿ ಚಂದ ಮಾಡಲಾಗಿತ್ತು. ಅದರ ಹಿಂದೆ ಅದೆಷ್ಟು ಸಮಯ ಆ ರಸ್ತೆಯನ್ನು ಕೇಳುವವರಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ