ನನ್ನ ಬಗ್ಗೆ ಗೊತ್ತಿರುವವರು ಕೈ ಎತ್ತಿ ಎಂದ ಮೊಹಮ್ಮದ್ ನಲಪಾಡ್: ಒಬ್ಬರೂ ಕೈ ಎತ್ತಲಿಲ್ಲ! - Mahanayaka
1:44 PM Saturday 2 - December 2023

ನನ್ನ ಬಗ್ಗೆ ಗೊತ್ತಿರುವವರು ಕೈ ಎತ್ತಿ ಎಂದ ಮೊಹಮ್ಮದ್ ನಲಪಾಡ್: ಒಬ್ಬರೂ ಕೈ ಎತ್ತಲಿಲ್ಲ!

nalapad
29/09/2022

ಚಿತ್ರದುರ್ಗ:  ಕೋಲು ಕೊಟ್ಟು ಪೆಟ್ಟು ತಿನ್ನುವುದು ಅಂದ್ರೆ ಇದೇ ಇರಬೇಕು, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್, ನಾನು ಎಷ್ಟು ಜನರಿಗೆ ಗೊತ್ತು ಎಂದು ಕೇಳಿ, ನಗೆಪಾಟಲಿಗೀಡಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗದಲ್ಲಿ ನಲಪಾಡ್ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ನಿಮ್ಮಲ್ಲಿ ಎಷ್ಟು ಜನಕ್ಕೆ ನಾನು ಯಾರು ಅನ್ನೋದು ಗೊತ್ತಿದೆ ಮತ್ತು ಗೊತ್ತಿರುವವರು ಕೈ ಮೇಲೆತ್ತಿ ಎಂದು ಹೇಳಿದ್ದಾರೆ. ಈ ವೇಳೆ ಒಬ್ಬರೇ ಒಬ್ಬರು ಕೈ ಎತ್ತದಿದ್ದಾಗ ಅವರು ಶಾಕ್ ಆಗಿದ್ದಾರೆ.

ಯಾರೂ ಕೈ ಎತ್ತದೇ ಇದ್ದಾಗ, ಒಬ್ಬರೂ ಇಲ್ವಾ? ಎಂದು ಮೊಹಮ್ಮದ್ ನಲಪಾಡ್ ಆಶ್ಚರ್ಯಕ್ಕೊಳಗಾಗುತ್ತಿರುವ ವಿಡಿಯೋ ಕಂಡು ಬಂದಿದೆ. ಕಾಂಗ್ರೆಸ್ ನ ಯುವ ನಾಯಕರ ಪರಿಚಯ ಕಾರ್ಯಕರ್ತರಿಗೇ ಇಲ್ಲದಿದ್ದರೆ ಹೇಗೆ?  ಇದು ಕಾಂಗ್ರೆಸ್ ಪಕ್ಷದ ದುಸ್ಥಿತಿಯೇ ಎನ್ನುವ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ