ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಭಾರತದ ಓರ್ವರ ಮನೆಯನ್ನು ವಶಪಡಿಸಿದ್ದಾರೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿ - Mahanayaka

ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಭಾರತದ ಓರ್ವರ ಮನೆಯನ್ನು ವಶಪಡಿಸಿದ್ದಾರೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಬಿಜೆಪಿ

20/11/2024

ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಭಾರತದ ಓರ್ವರ ಮನೆಯನ್ನು ವಶಪಡಿಸುತ್ತಿರುವುದಾಗಿ ಹೇಳಿ ಬಿಜೆಪಿ ಜಾಹೀರಾತು ಪ್ರಕಟಿಸುವ ಮೂಲಕ ವಿವಾದವನ್ನು ಹಾಕಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಬಿಜೆಪಿ ತನ್ನ ಈ ಜಾಹೀರಾತನ್ನು ಹಿಂತೆಗೆದುಕೊಂಡಿದೆ. ಚುನಾವಣಾ ಪ್ರಚಾರದ ಭಾಗವಾಗಿ ಜಾರ್ಖಂಡ್ನಲ್ಲಿ ಈ ಜಾಹೀರಾತನ್ನು ಬಿಜೆಪಿ ಬಿಡುಗಡೆಗೊಳಿಸಿತ್ತು.

ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಬಳಿಕ ಚುನಾವಣಾ ಆಯೋಗ ಸಕ್ರಿಯವಾಯಿತು. ತನ್ನ ಸೋಶಿಯಲ್ ಮೀಡಿಯಾ ಪುಟದಿಂದ ಈ ಜಾಹೀರಾತನ್ನು ಕಿತ್ತು ಹಾಕಬೇಕು ಎಂದು ಅದು ಬಿಜೆಪಿಗೆ ಆದೇಶಿಸಿತು.

ಈ ವಿಡಿಯೋ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಅತ್ಯಂತ ಪ್ರಚೋದನಕಾರಿಯಾಗಿ ಈ ಜಾಹೀರಾತನ್ನು ನಿರ್ಮಿಸಲಾಗಿದೆ. ಮನೆಯ ಮಂದಿ ಆಹಾರ ಸೇವಿಸುತ್ತಿರುವಾಗ ಮುಸ್ಲಿಂ ವಂಶಜರು ತಮ್ಮ ಲಗೇಜಿನೊಂದಿಗೆ ಭಾರತೀಯ ವ್ಯಕ್ತಿಯ ಮನೆಗೆ ಬಲವಂತದಿಂದ ಪ್ರವೇಶಿಸುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅತ್ಯಂತ ಕೆಟ್ಟ ವಾಸನೆಯೊಂದಿಗೆ ಈ ಮುಸ್ಲಿಮರು ಮನೆ ಪ್ರವೇಶಿಸುತ್ತಾರೆ ಎಂಬುದನ್ನು ಸನ್ನೆಯ ಮೂಲಕ ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಈ ಮುಸ್ಲಿಂ ಕುಟುಂಬದ ಮಕ್ಕಳು ಫರ್ನಿಚರ್ ಗಳಿಗೆ ಹಾನಿ ಉಂಟು ಮಾಡುವುದು ಮತ್ತು ಹಾಸಿಗೆಯಲ್ಲಿ ಆಟ ಆಡುವುದು ವಿಡಿಯೋದಲ್ಲಿದೆ. ಮಹಿಳೆಯರು ಪೂರ್ಣವಾಗಿ ಹಿಜಾಬ್ ಮತ್ತು ನಿಕಾಬ್ ಧರಿಸಿ ಮನೆ ಪ್ರವೇಶಿಸುತ್ತಾರೆ ಮತ್ತು ಮನೆಯನ್ನು ವಶಕ್ಕೆ ಪಡಕೊಳ್ಳುತ್ತಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ