ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ಕಳವು - Mahanayaka

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗ–ನಗದು ಕಳವು

sunkada katte
23/09/2022

ಬೆಳ್ತಂಗಡಿ:  ಅಳದಂಗಡಿ ಸುಂಕದಕಟ್ಟೆಯಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ಕಳವುಗೈದಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಸುಂಕದಕಟ್ಟೆಯ ನಿವಾಸಿ ಫೌಜಿಯಾ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಫೌಜಿಯಾ ಅವರು ರಾತ್ರಿ ಹತ್ತಿರದ ಸಹೋದರನ ಮನೆಗೆ ಹೋಗಿದ್ದು, ಬೆಳಿಗ್ಗೆ ಮನೆಗೆ ಬಂದು ಗಮನಿಸಿದಾಗ ಬಾಗಲಿನ ಚಿಲಕಿ ಮುರಿದಿರುವುದು ಕಂಡು ಬಂದಿದೆ.

ಕಳ್ಳರು ಬೀಗ ಮುರಿದು ಮನೆಯ ಬೆಡ್ ರೂಂನಲ್ಲಿದ್ದ  ಗೋದ್ರೇಜ್ ಕಪಾಟನ್ನು  ತೆರೆದು ಅದರಲ್ಲಿದ್ದ  ಸುಮಾರು ಎರಡೂವರೆ ಪವನ್ ತೂಕದ 2 ಚಿನ್ನದ ಸರ, 1 ಪವನ್ ತೂಕದ 2 ಜತೆ ಕಿವಿಯೋಲೆಗಳು, ಸುಮಾರು ಎರಡೂವರೆ ಪವನ್ ತೂಕದ 2 ಬ್ರಾಸ್‌ ಲೈಟ್ ಸೇರಿದಂತೆ ರೂ. 25  ಸಾವಿರ ನಗದನು ದೋಚಿದ್ದಾರೆ.

ನಗ-ನಗದು ಸೇರಿದಂತೆ ಕಳವಾದ ಒಟ್ಟು ಮೌಲ್ಯ ರೂ. ಮೂರು ಲಕ್ಷ ಎಂದು ಅಂದಾಜಿಸಲಾಗಿದ್ದು, ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ