ರಾಷ್ಟ್ರಧ್ವಜಕ್ಕೆ ಆಗಿರುವ ಅವಮಾನದಿಂದ ಭಾರತ ಆಘಾತಕ್ಕೊಳಗಾಗಿದೆ | ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
31/01/2021
ನವದೆಹಲಿ: ರೈತರು ಜನವರಿ 26ರಂದು ನಡೆಸಿದ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಆಘಾತ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ದಿನ ರಾಷ್ಟ್ರಧ್ವಜಕ್ಕೆ ಆಗಿರುವ ಅವಮಾನದಿಂದ ಭಾರತ ಆಘಾತಕ್ಕೊಳಗಾಗಿದೆ ಎಂದು ಅವರು ಹೇಳಿದ್ದಾರೆ. ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ನಡೆದ ವಿದ್ಯಮಾನಗಳನ್ನು ಅವರು ಉಲ್ಲೇಖಿಸಿದ್ದಾರೆ.
ಕೆಂಪುಕೋಟೆಯು ಜನವರಿ 26 ಗಣರಾಜ್ಯೋತ್ಸವ ದಿನದಂದು ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ರೈತರ ಒಂದು ಗುಂಪು ರೈತರ ಹೋರಾಟದ ಧ್ವಜವನ್ನು ಹಾರಿಸಿತ್ತು.